ಗೂಂಡಾಗಿರಿ ಮಾಡಲು ಇದು ಕನಕಪುರ ಅಲ್ಲ;ಡಿಕೆಶಿಗೆ ಜಗದೀಶ್​ ಶೆಟ್ಟರ್ ಎಚ್ಚರಿಕೆ

ಹುಬ್ಬಳ್ಳಿ:

    ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ರಾಹುಲ್ ಗಾಂಧಿ ಪ್ರಧಾನಿಗೆ ಚೌಕೀದಾರ್ ಚೋರ್ ಹೈ ಅಂತ ಹೇಳಿದ್ರು.  ಅದಕ್ಕೆ ಸುಪ್ರೀಂ ಛೀಮಾರಿ ಹಾಕಿತು. ನಂತರ ಈ ಬಗ್ಗೆ ರಾಹುಲ್ ಕ್ಷಮೆ ಕೇಳಿದರು. ಮೈತ್ರಿ ಲೋಕಸಭೆ ಫಲಿತಾಂಶದವರೆಗೆ ಮಾತ್ರ ಅಂತ ಮಾತುಕತೆ ಆಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರೇ ಸಿಗ್ನಲ್ ಕೊಟ್ಟಿದ್ರು. ಲೋಕಸಭೆ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಇರೋದಿಲ್ಲ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಬಿಂಬಿಸಲಾಗುತ್ತಿದೆ.  ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಆ ಮಾತು ಈಗ ಎಲ್ಲಿಗೆ ಬಂತು ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು, ದಲಿತರನ್ನು ಸಿಎಂ ಮಾಡ್ತೇನಿ ಅಂತ ಸಿದ್ದರಾಮಯ್ಯ ಹೇಳಿದ್ರು. ಅವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಸುಳ್ಳುಗಾರರಲ್ಲೇ ಮಹಾ ಸುಳ್ಳುಗಾರ ಎಂದು ಹೇಳಿದರು.


    ಕುಮಾರಸ್ವಾಮಿ, ದೇವೇಗೌಡರು ಟೆಂಪಲ್ ರನ್ ಮಾಡ್ತಿದ್ದಾರೆ. ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ. ಹೋಮ ಹವನ ಮಾಡುವುದರಿಂದ ಇವಿಎಂ ನಲ್ಲಿನ ಮತ ಬದಲಾವಣೆ ಆಗುತ್ತಾ. ಇದು ನೆರವೇರಿದರೆ ಪವಾಡವೇ ಆಗಿ ದೇವೇಗೌಡರೇ ಮತ್ತೆ ಪಿಎಂ ಆಗುತ್ತಾರೆ  ಎಂದು ಲೇವಡಿ ಮಾಡಿದರು.

   ಜನರ ಕಷ್ಟ ಅರಿಯಲು ಮುಖ್ಯಮಂತ್ರಿಗೆ ಸಮಯ ಇಲ್ಲ. ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಧಮ್ ಇಲ್ಲ‌. ಹೀಗಾಗಿ ಡಿಕೆಶಿ ಕುಂದಗೋಳಕ್ಕೆ ಬಂದಿದ್ದಾರೆ. ಅವರಲ್ಲಿ ಕಾರ್ಯಕರ್ತರು ಇಲ್ಲದ ಕಾರಣ ಬಿಜೆಪಿ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮಾರಾಟದ ಸರಕಲ್ಲ. ಅವರನ್ನು ಕೆಣಕುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ. ಇದು ರಾಮನಗರ, ಕನಕಪುರ ಅಲ್ಲ, ಗೂಂಡಾಗಿರಿ ಇಲ್ಲಿ‌‌ ನಡೆಯಲ್ಲ. ಚಿಂಚೋಳಿಯಲ್ಲೂ ಬಿಜೆಪಿ ಪರ ಅಲೆ ಇದೆ ಎಂದು ಡಿಕೆಶಿಗೆ ಎಚ್ಚರಿಕೆ ನೀಡಿದರು.

    ಲೋಕಸಭೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನಗೊಳ್ಳುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದು ಬಿ.ಎಸ್.ವೈ ಸಿಎಂ ಆಗೋದು ನಿಶ್ಚಿತ. ಸಿದ್ದರಾಮಯ್ಯ ಸಿಎಂ ಇದ್ದಾಗ ಕುರುಬರನ್ನು ಬೆಳೆಸಲಿಲ್ಲ. ಈ ಬಗ್ಗೆ ಶಿವಳ್ಳಿಯವರಲ್ಲೂ ಕೊರಗಿತ್ತು. ಹೀಗಾಗಿ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಸೂರ್ಯ-ಚಂದ್ರರು ಇರುವುದು ಎಷ್ಟು ನಿಜವೋ ಕೇಂದ್ರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ಅಷ್ಟೇ ಸತ್ಯ ಎಂದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ