ರಾಯಚೂರು:
ಅಂಬುಲೆನ್ಸ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್‌ನಲ್ಲಿ ಇದ್ದ ರೋಗಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮನ್ಸಲಾಪುರ ಬಳಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಹನುಮಂತರಾಯ (48) ಮೃತ ವ್ಯಕ್ತಿ. ಮೃತ ಹನುಮಂತರಾಯನ ತಲೆಗೆ ಪೆಟ್ಟಾಗಿದ್ದು, ಮಾನ್ವಿ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹನುಮಂತರಾಯನನ್ನ ಮಾನ್ವಿ ತಾಲೂಕಿನ ಆಸ್ಪತ್ರೆಯಿಂದ ರಿಮ್ಸ್‌ಗೆ ಅಂಬುಲೆನ್ಸ್ ಮೂಲಕ ಕರೆತರಲಾಗುತ್ತಿತ್ತು.
ಈ ವೇಳೆ ಮನ್ಸಲಾಪುರ ಬಳಿ ಬೈಪಾಸ್ ರಸ್ತೆಯಲ್ಲಿ ಅಂಬುಲೆನ್ಸ್‌ಗೆ ಟ್ರ್ಯಾಕ್ಟರ್ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್‌ನಲ್ಲಿದ್ದ ರೋಗಿ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಮೃತನ ಪತ್ನಿ ಸೇರಿ ಅಂಬುಲೆನ್ಸ್‌ನಲ್ಲಿದ್ದ ಆರು ಜನರಿಗೆ ಗಾಯಗಳಾಗಿವೆ. ಈ ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
