ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಸಮರ್ಪಣೆ ಮಾಡಲಿರುವ ಪ್ರಧಾನಿ

ಉಡುಪಿ: 

    ಹುತಾತ್ಮರಿಗೆ ಗೌರವ ನೀಡಲೆಂದೇ ನಿರ್ಮಿಸಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಇಂದು ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ನರೇಂದ್ರ ಮೋದಿ ಸಂತೋಷ ವ್ಯಾಕ್ತಪಡಿಸಿದು. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡ್ತಿರೋದು ನಮ್ಮಗೆ  ಹೆಮ್ಮೆಯೆನಿಸುತ್ತದೆ. ನನಗೆ ಯುದ್ಧ ಸ್ಮಾರಕ ನಿರ್ಮಾಣದ ಬಗ್ಗೆ ಐಡಿಯಾ ಬಂದಿದ್ದು, ಕರ್ನಾಟಕದ ಉಡುಪಿ ಮೂಲದ ಓಂಕಾರ ಶೆಟ್ಟಿ ಅವರಿಂದ ಎಂದು ಮೋದಿ ಹೇಳಿದ್ದಾರೆ.

  ನಿನ್ನೆ ಮನ್​​ ಕೀ ಬಾತ್​​ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ‘ಪಿಎಂ ನರೇಂದ್ರ ಮೋದಿ’ ಆ್ಯಪ್‌ನಲ್ಲಿ ಉಡುಪಿಯ ಓಂಕಾರ ಶೆಟ್ಟಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ರು. ಆಗ ನನಗೆ ಆಶ್ಚರ್ಯವಾಯ್ತು. ಭಾರತದಲ್ಲಿ ಹುತಾತ್ಮ ಯೋಧರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ಇರಲಿಲ್ಲ. ಪ್ರಾಣ ಲೆಕ್ಕಿಸದೇ ದೇಶದ ರಕ್ಷಣೆಗೆ ಹೋರಾಡುವ ಯೋಧರ ಸ್ಮಾರಣಾರ್ಥ ಯುದ್ಧ ಸ್ಮಾರಕ ನಿರ್ಮಾಣ ಮಾಡಲು ನಿರ್ಧಾರಿಸಿದ್ದವೆ . ದೇಶದಲ್ಲಿ ಸ್ಮಾರಕದ ಅವಶ್ಯಕತೆ ಇತ್ತು. ಹೀಗಾಗಿ ನಾವು ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಲು ಮುಂದಾದೆವು. ಈ ಬಗ್ಗೆ ನನಗೆ ಖುಷಿ ಇದೆ ಎಂದರು

  ಈ ಸ್ಮಾರಕ ಕಡಿಮೆ ಸಮಯದಲ್ಲಿ ನಿರ್ಮಾಣವಾಗಿದ್ದು ತುಂಬಾ ಸಂತೋಷವಾಗಿದೆ. ನೂರಾರು ಕೋಟಿ ಜನರ ಮುಂದೆ ರಾಷ್ಟ್ರೀಯ ಯುದ್ಧ ಸ್ಮಾರಕ ಇಂದು ಸಮರ್ಪಣೆ ಮಾಡಲಿದ್ದೇವೆ ಎಂದು ನರೇಂದ್ರ ಮೋದಿ ತಿಳಿಸಿದ್ದರು.

 

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ