ಸೆಲ್ಫಿ ಹುಚ್ಚಿಗೆ ಜೀವ ಬಲಿ

ಹಾಸನ: 

   ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದಿದ್ದ ನಾಲ್ವರು ಯುವಕರಲ್ಲಿ ಓರ್ವ ಯುವಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲೂಕಿನ ಮೂಕನ ಮನೆ ಫಾಲ್ಸ್ ನಲ್ಲಿ ನಡೆದಿದೆ.

   ಬೆಂಗಳೂರಿನ ನಿವಾಸಿ ತನುಷ್ (23) ಮೃತಪಟ್ಟ ಹುಡುಗ, ಬೆಂಗಳೂರಿನ ತಿಗಳರ ಪಾಳ್ಯದಿಂದ ತನುಷ್, ಪುರುಷೋತ್ತಮ್, ಮನೋಜ್ ಸೇರಿದಂತೆ ನಾಲ್ವರು ಕಳೆದ ಎರಡು ದಿನಗಳಿಂದ ಬೈಕ್‍ನಲ್ಲಿ ಪ್ರವಾಸ ಕೈಗೊಂಡಿದ್ದರು. ಮೊದಲು ಮಡೀಕೇರಿ ಪ್ರವಾಸ ಮುಗಿಸಿ ನಂತರ ಹಾಸನದ ಮೂಕನಮನೆ ಫಾಲ್ಸ್ ಗೆ ಬಂದಿದ್ದರು. ಆದರೆ ಫಾಲ್ಸ್ ನಲ್ಲಿ ಬಂಡೆಯಿಂದ ಹರಿಯುತ್ತಿದ್ದ ನೀರಿನ ಜೋತೆ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ತನುಷ್ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.

  ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದು, ಸದ್ಯ ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ