2.89 ಲಕ್ಷ ರೂ. ವೆಚ್ಚದ ಚಿನ್ನದ ಮಾಸ್ಕ್ ಧರಿಸಿದ ವ್ಯಕ್ತಿ!!

ಪುಣೆ :

      ಪುಣೆಯ ವ್ಯಕ್ತಿಯೊಬ್ಬ ಕೊರೋನ ಕಾಲದಲ್ಲೀಗ ಚಿನ್ನದ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

     ಹೌದು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದಾರೆ.  “ಇದೊಂದು ತೆಳುವಾದ ಮಾಸ್ಕ್. ಸಣ್ಣ ತೂತುಗಳು ಕೂಡ ಇದೆ. ಹೀಗಾಗಿ ಉಸಿರಾಡಲು ಸಮಸ್ಯೆಯಾಗುವುದಿಲ್ಲ. ಇದು ಪರಿಣಾಮಕಾರಿ ಮಾಸ್ಕ್ ಆಗಿದೆಯೇ ಎಂದು ನನಗೆ ಗೊತ್ತಿಲ್ಲ” ಎಂದು ಶಂಕರ್  ತಿಳಿಸಿದ್ದಾರೆ.

      ಸದ್ಯ ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ