ಭಾರತೀಯ ಸೇನೆಗೆ ಸಲಾಂ ಎಂದ ರಾಹುಲ್!

     ಭಾರತೀಯ ವಾಯುಪಡೆಗೆ ಟ್ವೀಟ್ ಮೂಲಕ ಶ್ಲಾಘಿಸಿರುವ ರಾಹುಲ್​, ”ನಾನು ಐಎಎಫ್‌ನ ಪೈಲಟ್ಸ್‌ಗಳಿಗೆ ಸೆಲ್ಯೂಟ್ ಮಾಡುವೆ” ​  ಎಂದು ಒಂದು ವಾಕ್ಯದಲ್ಲಿ ಬರೆದುಕೊಂಡಿದ್ದಾರೆ.
      ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಭೀಕರ ದಾಳಿಯನ್ನು ಎಲ್ಲ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿದ್ದವು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್​ ಗಡಿಯೊಳಗೆ ನುಗ್ಗಿ, ಉಗ್ರರ ಅಡಗುತಾಣಗಳ ನಾಶ ಮಾಡಿದೆ ಎಂದು ಹೇಳಲಾಗ್ತಿದೆ. 
      ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಮಿರಾಜ್‌ 2000 ಯುದ್ಧ ವಿಮಾನಗಳು ಇಂದು ಗಡಿ ನಿಯಂತ್ರಣ ರೇಖೆ ಬಳಿಯ ಜೈಷ್‌ ಇ ಮೊಹಮ್ಮದ್‌ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಹಲವಾರು ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿ ಸೇನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap