ವಿಶ್ವಕಪ್ 2019 : ಶಿಖರ್ ಧವನ್ ಜಾಗಕ್ಕೆ ರಿಷಭ್ ಪಂತ್!!!

ಲಂಡನ್ :

      ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಆರಂಭಿಕ ಆಟಗಾರ ಶಿಖರ್‌ ಧವನ್‌ ಅವರ ಬದಲಾಗಿ 21ರ ಹರೆಯದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಭಾರತೀಯ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

      ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭಾರಿ ಆಘಾತಕ್ಕೊಳಗಾಗಿದ್ದು, ಇನ್ ಫಾರ್ಮ್ ಎಡಗೈ ಅನುಭವಿ ಓಪನರ್ ಶಿಖರ್ ಧವನ್ ಗಾಯದಿಂದಾಗಿ ಮೂರು ವಾರಗಳಷ್ಟು ಕಾಲ ತಂಡದಿಂದ ಹೊರಗುಳಿಯುವಂತಾಗಿದೆ. 

Related image

     “ಭಾರತೀಯ ತಂಡದ ಆಡಳಿತದ ಕೋರಿಕೆಯ ಪ್ರಕಾರ ರಿಷಭ್‌ ಪಂತ್‌ ಅವರನ್ನು ವಿಮಾನದಲ್ಲಿ ಕಳುಹಿಸಲಾಗುತ್ತಿದೆ’    ನ್ಯೂಜೀಲ್ಯಾಂಡ್‌ ಪಂದ್ಯದ ಮುನ್ನಾ ದಿನ ರಿಷಭ್‌ ಪಂತ್‌ ಅವರು ಭಾರತೀಯ ತಂಡವನ್ನು ಸೇರಿಕೊಳ್ಳುವರು. ಎನ್ನಲಾಗಿದೆ.

     ಹಾಗಿದ್ದರೂ ಧವನ್‌ ಅವರು ವಿಶ್ವಕಪ್‌ ಪಂದ್ಯಾವಳಿಯ ಶೇಷ ಭಾಗಕ್ಕೆ ಲಭ್ಯರಿರುವ ಬಗ್ಗೆ ತಂಡದ ಆಡಳಿತೆಯು ಅಂತಿಮ ನಿರ್ಧಾರ ಕೈಗೊಳ್ಳುವ ತನಕ ಪಂತ್‌ ಅವರ ಸೇರ್ಪಡೆಯನ್ನು ಪರಿಗಣಿಸಲಾಗದು ಎಂದು ಮೂಲಗಳು ಹೇಳಿವೆ.

 

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

      

Recent Articles

spot_img

Related Stories

Share via
Copy link
Powered by Social Snap