ಜೈಪುರ :
ಅಪಘಾತಕ್ಕೀಡಾಗುತ್ತಿದ್ದ ಗೂಳಿಯನ್ನು ರಕ್ಷಿಸುವ ಯತ್ನದಲ್ಲಿ ಮಿನಿ ಬಸ್ಸೊಂದು ಉರುಳಿ ಬಿದ್ದು ಮರಕ್ಕೆ ಅಪ್ಪಳಿಸಿದ ಪರಿಣಾಮ 12 ಮಂದಿ ಮೃತಪಟ್ಟರುವ ದುರ್ಘಟನೆ ನಾಗೌರ್ ಜಿಲ್ಲೆಯ ಕುಚಮನ್ ನಗರದ ಮೆಗಾ ಹೆದ್ದಾರಿಯಲ್ಲಿ ನಡೆದಿದೆ.
ಶನಿವಾರ ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಮಹಾರಾಷ್ಟ್ರ(Maharashtra) ದ ಲಾತೂರ್ ಮತ್ತು ಶೋಲಾಪುರದ ಜನರು 2 ಮಿನಿ ಬಸ್‌ಗಳಲ್ಲಿ ಹರಿಯಾಣದ ಹಿಸಾರ್‌ನಲ್ಲಿರುವ ತಮ್ಮ ಧರ್ಮ ಗುರುಗಳನ್ನು ಭೇಟಿ ಮಾಡಲು ಹೊರಟಿದ್ದರು ಎನ್ನಲಾಗಿದೆ. ಈ ಬಸ್ಸುಗಳು ಕುಚಮಾನ್ ಸಿಟಿಯ ಬಳಿಯ ಕಿಶನ್‌ಗಢ- ಹನುಮನ್‌ಗಢ ಮೆಗಾ ಹೆದ್ದಾರಿಯ ಮೂಲಕ ಹಾದುಹೋದಾಗ, ಮಾರ್ಗದಲ್ಲಿ ಗೂಳಿಯೊಂದು ಅಡ್ಡ ಬಂತು. ಅದರ ಜೀವ ಉಳಿಸಲು ಚಾಲಕ ವಾಹನವನ್ನು ಪಕ್ಕಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಮರವೊಂದಕ್ಕೆ ಅಪ್ಪಳಿಸಿತು ಎಂದು ಪೊಲೀಸರು ಹೇಳಿದ್ದಾರೆ.
Rajasthan: 11 people died after the two mini buses they were travelling in lost balance and met with an accident in Kuchaman City of Nagaur, at around 3 am, today. Injured have been admitted to hospital. pic.twitter.com/Avapl5U7y6
— ANI (@ANI) November 23, 2019
5 ಮಹಿಳೆಯರು ಮತ್ತು ಬಾಲಕಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ಜನರನ್ನು ಭಗವಾನ್, ಸುಮಿತಾ, ಪಲ್ಲಿರಾಮ್, ಮಯೂರಿ, ರಾಮಪ್ರಸಾದ್, ಗೋವಿಂದ್, ಶಿವಪ್ರಸಾದ್, ಸಿದ್ಧಿ, ಸಾಲು ಬಾಯಿ ಮತ್ತು ಸುಪ್ರಿಯಾ ಎಂದು ಗುರುತಿಸಲಾಗಿದೆ.
ಇನ್ನು 10 ಜನರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ