ದೆಹಲಿ :
ಭಾರತದ ಗುಪ್ತಚರ ಏಜನ್ಸಿ ರಿಸರ್ಚ್ ಆಯಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥರಾಗಿ ಸಮಂತ್ ಗೋಯಲ್ ಹಾಗೂ ಇಂಟಲಿಜೆನ್ಸ್ ಬ್ಯುರೋ(ಐಬಿ) ನಿರ್ದೇಶಕರನ್ನಾಗಿ ಅರವಿಂದ್ ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇಮಕ ಮಾಡಿದ್ದಾರೆ.
‘ರಾ’ ಮತ್ತು ‘ಐಬಿ’ ಮುಖ್ಯಸ್ಥರ ಹುದ್ದೆಗಳ ಅವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ ಆದ್ದರಿಂದ ಕೇಂದ್ರ ಸರ್ಕಾರ ಇಂದು ದೇಶದ ಎರಡು ಪ್ರತಿಷ್ಠಿತ ಗುಪ್ತಚರ ಇಲಾಖೆಗೆ ನೂತನ ನಿರ್ದೇಶಕರನ್ನು ನೇಮಕ ಮಾಡಿದೆ.
ರಾ’ ಮುಖ್ಯಸ್ಥರಾಗಿ ನೇಮಕಗೊಂಡಿರುವ 1984 ಬ್ಯಾಚಿನ ಪಂಜಾಬ್ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಸಮಂತ್ ಗೋಯಲ್ ಅವರು ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ಹಾಗೂ ಉರಿ ದಾಳಿಯ ನಂತರ 2016ರಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಸ್ಸಾಂ-ಮೇಘಾಲಯ ಕೇಡರ್ ನ ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಇಂಟೆಲಿಜೆನ್ಸ್ ಬ್ಯುರೋದ ಕಾಶ್ಮೀರ ಡೆಸ್ಕ್ ನಲ್ಲಿ ವಿಶೇಷ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಕಾಶ್ಮೀರ್ ಎಕ್ಸ್ ಪರ್ಟ್ ಎಂದೇ ಹೆಸರುಗಳಿಸಿದ್ದಾರೆ. ಅಲ್ಲದೇ ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
