ಬೆಂಗಳೂರು:
ಬಿಗ್ ಬಾಸ್ ಸೀಸನ್-5ರ ಮೂಲಕ ಕಿರುತೆರೆ ವೀಕ್ಷಕರ ಮನಮಾತಾದಗಿ, ಜನಪ್ರಿಯರಾದ ನಿವೇದಿತಾ ಗೌಡ ಈ ಹೊಸ ವೃತ್ತಿ ಆರಂಭಿಸುತ್ತಿದ್ದಾರೆ. ಮತ್ತೊಂದೆಡೆ ದಾಂಪತ್ಯ ಜೀವನಕ್ಕೂ ಸಜ್ಜಾಗುತ್ತಿದ್ದಾರೆ.
BCA ಪದವಿ ಪಡೆದ ನಂತರ ಕೆಲ ದಿನಗಳ ಕಾಲ ‘ಕಾಮಿಡಿ ಕಂಪನಿ’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ನಿವೇದಿತಾ, ಬಳಿಕ ಗಗನ ಸಖಿಯಾಗಲು ತರಬೇತಿ ಪಡೆಯುತ್ತಿದ್ದರು. ಈಗ ಬೆಂಗಳೂರು ಏರ್‌ಪೋರ್ಟ್‌ನ ಪ್ರತಿಷ್ಠಿತ ಕಂಪನಿಯಲ್ಲಿ ಅಪರೇಷನ್ ಅಸಿಸ್ಟೆಂಟ್ ಅಗಿ ವೃತ್ತಿ ಆರಂಭಿಸಿದ್ದಾರೆ. ಏರ್ಪೋರ್ಟ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ನಿವೇದಿತಾ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ