ಚಿದಂಬರಂ ಮನೆ ಕಾಂಪೌಂಡ್ ಹಾರಿ ಬಂಧಿಸಿದ CBI ಅಧಿಕಾರಿಗಳು!!

ದೆಹಲಿ :

       ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಬಂಧಿಸಲು ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಜೋರ್ ಬಾಗ್​ನಲ್ಲಿರುವ ನಿವಾಸವನ್ನು ಸುತ್ತುವರಿದು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿದ ಘಟನೆ ನಡೆದಿದೆ.

     ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿ, ಅವರ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಿತು. ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್‌ ಮಂಗಳವಾರ ನಿರಾಕರಿಸಿತ್ತು. ಅದಾದ ಬಳಿಕ ಚಿದಂಬರಂ ಅವರನ್ನು ಬಂಧಿಸುವ ಪ್ರಯತ್ನವನ್ನು ಸಿಬಿಐ ಆರಂಭಿಸಿತ್ತು. ಆದರೆ, ಅವರು ಯಾರ ಕೈಗೂ ಸಿಕ್ಕಿರಲಿಲ್ಲ.

      ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬಳಿಕ ಬುಧವಾರ ಸಂಜೆ ಅವರು ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.  

      ಸುದ್ದಿಗೋಷ್ಠಿ ಬಳಿಕ ಚಿದಂಬರಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್​ ಸಿಂಘ್ವಿ ಜೊತೆಗೆ ಜೋರ್​ ಬಾಗ್​ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಬಳಿಕ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಕೂಡ ಚಿದಂಬರಂ ನಿವಾಸದ ಮುಂದೆ ಜಮಾಯಿಸಿದರು. ಆದರೆ, ಮನೆಗೆ ಗೇಟ್​ಗಳನ್ನು ತೆರೆಯದಿದ್ದಾಗ ಅಧಿಕಾರಿಗಳು ಕಾಂಪೌಂಡ್​ ಜಿಗಿದು ಮನೆಯೊಳಗೆ ಹೋದರು. ಆ ಬಳಿಕ ಚಿದಂಬರಂನನ್ನು ವಶಕ್ಕೆ ಪಡೆದರು.

      ಚಿದಂಬರಂ ಅವರನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದೊಯ್ಯುವಾಗ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

       ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರಕ್ಕೆ ಮುಂದೂಡಿದೆ. ಈ ಮೂಲಕ ಮತ್ತೊಮ್ಮೆ ಮಾಜಿ ಹಣಕಾಸು ಸಚಿವರಿಗೆ ನ್ಯಾಯಾಲಯದಲ್ಲಿ ಹಿನ್ನೆಡೆಯುಂಟಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap