ಶ್ರೀನಗರ:
ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್‌ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಘಾಜಿಯನ್ನು ಹತ್ಯೆ ಮಾಡುವ ಮೂಲಕ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ
ಅಬ್ದುಲ್ ರಶೀದ್ ಜೊತೆ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕಮ್ರಾನ್‍ನನ್ನು ಸಹ ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ.
ಈ ಮೂಲಕ ಗುರುವಾರ ಭಾರತದ 40 ಯೋಧರ ಬಲಿ ಪಡೆದಿದ್ದ ದಾಳಿಯ ಸಂಚುಕೋರರನ್ನು ಸೇನೆ ಹೊಡೆದುರುಳಿಸಲು ಯಶಸ್ವಿಯಾಗಿದೆ ಎನ್ನಲಾಗಿದೆ.
ಉಗ್ರ ದಮನಕ್ಕಾಗಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದು, ಸೇನೆ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಾಗಿದೆ. ಈಗಾಗಲೇ ನಾಲ್ಕೈದು ಭಯೋತ್ಪಾದಕರನ್ನು ಬಲೆಗೆ ಬೀಳಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
