ನವದೆಹಲಿ :
ಖಾಸಗಿ ಕ್ಷೇತ್ರದ ಯೆಸ್ ಬ್ಯಾಂಕ್ ಅನ್ನು ನಿನ್ನೆ ಆರ್ಬಿಐ ಸೂಪರ್ಸೀಡ್ ಮಾಡಿದ್ದು, ಗ್ರಾಹಕರು ಬಿಡಿಸಿಕೊಳ್ಳುವ ಹಣದ ಲಿಮಿಟ್ ಅನ್ನು 50 ಸಾವಿರಕ್ಕೆ ಸೀಮಿತ ಮಾಡಿದೆ.
ಯೆಸ್ ಬ್ಯಾಂಕ್ನ ಚೀಫ್ ಎಕ್ಸಿಕ್ಯೂಟಿವ್ ಆಗಿ ರವ್ನೀತ್ ಗಿಲ್ ಅಧಿಕಾರಕ್ಕೆ ಬಂದ ಮೇಲೆ ಬ್ಯಾಂಕ್ನ ಆಡಳಿತದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳು ಕಂಡುಬಂದಿದ್ದವು. ಅಲ್ಲದೆ ಬ್ಯಾಂಕ್ನ ಸಾಲದ ಲೆಕ್ಕದಲ್ಲಿ ಬೃಹತ್ ಮೊತ್ತ ಖೋತಾ ಆಗಿತ್ತು. ಸಾಲ ವಾಪಸ್ ಆಗದ ಲೆಕ್ಕಗಳೇ ಜಾಸ್ತಿ ಇದ್ದವು. ಸುಮಾರು 1400 ಕೋಟಿಯಷ್ಟು ಬಂಡವಾಳ ಸಂಗ್ರಹಕ್ಕೆ ಹರಸಾಹಸ ಪಡುತ್ತಿತ್ತು. ಈ ಹಿನ್ನೆಲೆ ಆರ್ಬಿಐ ಹಾಗೂ ಎಲ್ಐಸಿ ಯೆಸ್ ಬ್ಯಾಂಕ್ನ ಷೇರುಗಳಲ್ಲಿ ಪಾಲು ಪಡೆಯಲಿದೆ ಎನ್ನುವ ಸುದ್ದಿ ಕೂಡ ನಿನ್ನೆ ಹರಿದಾಡಿತ್ತು. ಈ ಸಂಬಂಧ ಎಸ್ಬಿಐನ ಡಿಎಂಡಿ ಌಂಡ್ ಸಿಎಫ್ಒ ಆಗಿದ್ದ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ.
ಇನ್ನೊಂದೆಡೆ RBI ಯೆಸ್ ಬ್ಯಾಂಕ್ನಿಂದ ಗ್ರಾಹಕರು ಬಿಡಿಸಿಕೊಳ್ಳುವ ಹಣದ ಲಿಮಿಟ್ ಅನ್ನು 50 ಸಾವಿರಕ್ಕೆ ಸೀಮಿತ ಮಾಡಿದೆ.
ತೊಂದರೆಯ್ಲಲಿ ಫೋನ್ ಪೇ :
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದ್ದು, ಅದರ ನೇರ ಪರಿಣಾಮ ಫೋನ್ ಪೇ ಮೇಲೆ ಉಂಟಾಗಿ ಜನರು ಪರದಾಡುವಂತಾಗಿದೆ.
ಹೌದು, ಹಣ ವರ್ಗಾವಣಾ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಇದೀಗ ಯೆಸ್ ಬ್ಯಾಂಕ್ ಮೇಲಿನ ನಿಷೇಧದಿಂದ ಫೋನ್ ಪೇ ಸೇವೆಗಳು ಸಿಗುತ್ತಿಲ್ಲ. ಈ ಕುರಿತು ಫೋನ್ ಪೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡು ಜನರಲ್ಲಿ ಕ್ಷಮೆ ಯಾಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
