ಬೆಂಗಳೂರು:
ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದ ಸ್ವಾಮೀಜಿಯವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆಯಾಗಿ ರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಅಂತೆಯೇ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂ. ಪಿ. ಗಣೇಶ್ (ಕ್ರೀಡೆ), ಡಾ. ಗಂಗಾಧರ್ (ವೈದ್ಯಕೀಯ), ಭರತ್ ಗೋಯೆಂಕಾ, ವಿಜಯ್ ಸಂಕೇಶ್ವರ (ವ್ಯಾಪಾರ ಮತ್ತು ಉದ್ಯಮ), ತುಳಸಿ ಗೌಡ, ಹರೇಕಳ ಹಾಜಬ್ಬ (ಸಮಾಜ ಸೇವೆ), ಕೆ. ವಿ. ಸಂಪತ್ ಕುಮಾರ್ ಮತ್ತು ವಿದುಷಿ ಕೆ.ಎಸ್. ಜಯಲಕ್ಷ್ಮಿ (ಸಾಹಿತ್ಯ ಮತ್ತು ಶಿಕ್ಷಣ- ಪತ್ರಿಕೋದ್ಯಮ) ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.
ಈ ಎಲ್ಲ ಗಣ್ಯರ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಎಂದು ಅವರು ಆಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ