ತಿಪಟೂರು ; ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ತಿಪಟೂರು :

   ತಾಲ್ಲೂಕಿನ ಕರಡಿ ಹಾಗೂ ಬಾಣಸಂದ್ರ ಮಧ್ಯೆ ಬರುವ ರೈಲ್ವೇ ಮಾರ್ಗದಲ್ಲಿ ವ್ಯಕ್ತಿಯೋರ್ವ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರುನಲ್ಲಿ  ನಡೆದಿದೆ. ವ್ಯಕ್ತಿಯ ಗುರುತು ಇಲ್ಲಿಯವರೆಗೂ ಕೂಡ ಪತ್ತೆಯಾಗಿಲ್ಲ.  ಮೃತ ವ್ಯಕ್ತಿಯು ಲೋಕೊ ಪೈಲಟ್ ಹೇಳುವ ಪ್ರಕಾರ ರೈಲು ಬರುವ ಸಮಯದಲ್ಲಿ ರೈಲಿಗೆ ಅಡ್ಡಲಾಗಿ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

   ಮೃತ ವ್ಯಕ್ತಿಯು ರೆಡಿಮೇಡ್ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟಿದ್ದು ಹೆಚ್ಚಿನ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ . ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸ್ ಠಾಣಾಧಿಕಾರಿ ಮುದಿಯಪ್ಪ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತ ವ್ಯಕ್ತಿಯ ಗುರುತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ