ಇರುಳು  ಜಾರುತಿದೆ ಸುಮ್ಮನೆ…

0
24


ಇರುಳು  ಜಾರುತಿದೆ ಸುಮ್ಮನೆ
ಆದರೂ ಮಾಧವನ ಸುಳಿವಿಲ್ಲ, ನಿದಿರೆಯದೂ..

ಅವನು ಬಾರದೆ ನಿದಿರೆಯೂ ಸುಳಿಯದು, ಸುಮ್ಮನೆ ಜಾರುತಿದೆ ಇರುಳು

ಮಾಧವ ಕೊಟ್ಟ ಮಾತು ಮರೆತನೇ?

ರಾಧೆ ಅವನಿಗಾಗಿ ಕಾದು ಕುಳಿತಿಹಳು

ದೀಪದ ಮಂದಬೆಳಕಲ್ಲಿ ಅದನ್ನೇ ದಿಟ್ಟಿಸುತ

ಅವನ ಕಾಣುತ ಅದರಲ್ಲಿ..

ನಿದಿರೆ ಬಾರದು..

ಆದರೂ ಇರುಳು ಜಾರುತಿದೆ…

 

ಚಿಂತಾಮಗ್ನಳಾಗಿರುವಳು

ಅವಳೊಳಗೇ ಪ್ರಶ್ನಿಸಿಕೊಳ್ಳುತಾ..

ಅವನ ಸಖಿಯರೇನಾದರು

ದಾರಿಗೆ ಅಡ್ಡಿಪಡಿಸಿರಬಹುದೆ?

ಅಥವಾ ಅವನ ಶತ್ರುಗಳ ದೃಷ್ಟಿಯೇನಾದರೂ

ತಗುಲೀತೆ..?

ನಿದಿರೆಯ ಸುಳಿವಿಲ್ಲ..

ಇರುಳು ಜಾರುತಿದೆ…

 

ಎದೆಯಲರಿಯುತಿಹ ಪ್ರಲಾಪದಳಲು

ಮತಿಗೆಡಿಸುತಿರಲು ರಾಧೆಯ..

ಕಾತರದಿ ಕಾದು ಅಳುತಿದೆ  ಶ್ಯಾಮನಿಗೆ ಹೃದಯ

ಇನ್ನೂ ಬಾರದ ಅವನ ನೆನೆದು ಧ್ಯಾನದಲಿ..

ನಿದಿರೆ ಸುಳಿಯದು..

ಇರುಳು ಸುಮ್ಮನೆ ಜಾರುತಿದೆ… 

LEAVE A REPLY

Please enter your comment!
Please enter your name here