
ಮನ ಹೂವಾಗಿ ಅರಳಲಿ
ಚೈತ್ರದ ಗಾನದಲ್ಲಿ
ತನು ಹಿಗ್ಗಿ,ಹಿಗ್ಗಿ ನಲಿಯಲಿ |
ಹೊಸತನದ ಕನಸಿನಲ್ಲಿ
ನನಸಿನ ಆಶಯವಿರಲಿ
ಭೂ ತಾಯಿಯ ಮಡಿಲಲ್ಲಿ
ರಸ ಬೀಜ ಮೊಳೆಯಲಿ |
ಮಾಮರದ ಎಲೆಯಲ್ಲಿ
ಸಮ ಜೀವ ಚಿಗುರಲಿ
ಬೇವಿನ ಎಸಳುಗಳಲ್ಲಿ
ನವ ಚೇತನ ಚಿಮ್ಮಲಿ |

ಬಾಗಿಲತೋರಣದಲ್ಲಿ
ಹಸಿರುಟ್ಟು ನಲಿಯಲಿ
ಅಂಗಳದ ರಂಗೋಲಿ
ಕೈ ಬಿಸಿ ಸ್ವಾಗತಿಸಲಿ |
ಹೋಳಿಗೆಯ ಊರಣದಲ್ಲಿ
ಹದವಾದ ಸಿಹಿ ಇರಲಿ
ಬದಲಾದ ಉಡುಗೆಯಲ್ಲಿ
ಹಸನಾದ ಉರುಪಿರಲಿ |
ಕಣ್ಣಕಾಂತಿ ಹೊಳಪಿನಲ್ಲಿ
ಚಿರ ಚೈತನ್ಯ ಬೆಳಗಲಿ
ಮಣ್ಣ ಕಣ,ಕಣದಲ್ಲಿ
ಗೋದೂಳಿ ಬಣ್ಣ ಚಿಮ್ಮಲ |
ನೆನ್ನೆಯ ಹಣತೆಯಲ್ಲಿ
ಇಂದಿನ ಬೆಳಕಿರಲಿ
ನಾಳಿನ ಭರವಸೆಯಲ್ಲಿ
ನಂದಾ ದೀಪವಾಗಲಿ |
ವಿ ಶ್ವವ್ಯಾಪಕ
ಕಾ ರಣ ಕರ್ತನ
ರಿ ಂಗಣದ ಅಂಕಣದ
ಸಧ್ಬಾವದ ದಿನಗಳನ್ನು
ಹೊಸ ವರ್ಷ ಹರುಷದಿ
ಮನದುಂಬಿ ಸ್ವಾಗತಿಸಲಿ ||
– ವೆನ್ನಲಕೃಷ್ಣ, ತುಮಕೂರು
