ಎ-ಖಾತ ಮತ್ತು ಬಿ-ಖಾತ ಮಾಡಿಕೊಳ್ಳಲು ಜೆ ಆರ್‌ ರವಿಕುಮಾರ್‌ ಮನವಿ ….!

ನಾಯಕನಹಟ್ಟಿ :-

    ಬಡವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಎ-ಖಾತ ಮತ್ತು ಬಿ-ಖಾತ ಅಭಿಯಾನಕ್ಕೆ ಮತ್ತೆ ಮೂರು ತಿಂಗಳು ಗುಡುವು ನೀಡಿದ್ದರಿಂದ ಆಸ್ತಿ ಮಾಲೀಕರು ಕಡ್ಡಾಯವಾಗಿ ಎ-ಖಾತ ಮತ್ತು ಬಿ-ಖಾತ ಮಾಡಿಕೊಳ್ಳಿ ಎಂದು ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ 9ನೇ ವಾರ್ಡ್ ನ ಸದಸ್ಯ ಜೆ.ಆರ್.ರವಿಕುಮಾರ್ ಮನವಿ ಮಾಡಿಕೊಂಡರು.

   ಪಟ್ಟಣದ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಎ-ಖಾತ ಮತ್ತು ಬಿ-ಖಾತ ದಿಂದ ಜನರಿಗೆ ಸರ್ಕಾರದಿಂದ ಬರುವ ಸಾಲ ಸೌಲಭ್ಯಗಳು ಸುಲಭವಾಗಿ ಸಿಗಲಿವೆ ಅದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ವಿನಂತಿಸಿದರು.

   ನಾಯಕನಹಟ್ಟಿ ಪಟ್ಟಣದ ಪಂಚಾಯಿತಿಯಲ್ಲಿ ಮಧ್ಯವರ್ತಿಗಳ ಆವಳಿ ಹೆಚ್ಚಾಗಿ ಕಂದುಬಂದಿದ್ದರಿಂದ ಆಸ್ತಿ ಮಾಲೀಕರು ಕಡ್ಡಾಯವಾಗಿ ಪಟ್ಟಣ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸಿ ಎಂದು ಹೇಳಿದರು. ಎ-ಖಾತ ಮತ್ತು ಬಿ-ಖಾತ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಮಯ ವ್ಯರ್ಥ ಮಾಡದೆ ಜನರು ಅದನ್ನು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.

Recent Articles

spot_img

Related Stories

Share via
Copy link