ಬೆಂಗಳೂರು:

ರಾಜ್ಯದ ದಿನಪತ್ರಿಕೆಗಳಿಗೆ ಬಾಕಿ ಇರುವ 50 ಕೋ.ರೂ.ಗಳ ಜಾಹೀರಾತು ಬಾಬ್ತುನ್ನು ತಕ್ಷಣವೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸಂಪಾದಕರುಗಳ ನಿಯೋಗವೊಂದು ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಕಷ್ಟ, ಸಮಸ್ಯೆಗಳನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ತಕ್ಷಣವೆ ಬಾಕಿ ಇರುವ 50 ಕೋ. ರೂ ಮೊತ್ತವನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಆದೇಶಿಸಿದರು.
ನಿಯೋಗದಲ್ಲಿ Kuwj ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, , ifwj ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಹಿರಿಯ ಸಂಪಾದಕರಾದ ಎಸ್.ನಾಗಣ್ಣ, ಹಾಸನದ ಆರ್.ಪಿ.ವೆಂಕಟೇಶ್ ಮೂರ್ತಿ, ಎನ್.ರವಿಕುಮಾರ್, ರಶ್ಮಿಪಾಟೀಲ್, ಚೆಲುವರಾಜ್, ಸೋಮಶೇಖರ್ ಕೆರೆಗೋಡು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








