ಗಾಳಿಪಟ ಗುರಿ ಮುಟ್ಟುವ ಪಾಠ ಕಲಿಸುತ್ತದೆ :ಎನ್. ಚೆಲುವರಾಯಸ್ವಾಮಿ

ಬೆಂಗಳೂರು :

   ಜೀವನದಲ್ಲಿ ನಿಗದಿಪಡಿಸಿಕೊಳ್ಳುವ ಗುರಿಯನ್ನು ತಲುಪಬೇಕು ಎಂಬ ಪಾಠವನ್ನು ಗಾಳಿಪಟ ಕಲಿಸುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆÀಲುವರಾಯಸ್ವಾಮಿ ಅವರು ತಿಳಿಸಿದರು.

   ಅವರು ಮಂಡ್ಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜನಪದ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 33 ನೆ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ಅನ್ನ ದಾಸೋಹದ ಜೊತೆಗೆ ಜನಪದ ಕಲೆಯನ್ನು ಆದಿ ಚುಂಚನಗಿರಿ ಮಠ ಪೋಷಿಸುತ್ತಿದೆ. ಮಠ ಜನಪದ ಕಲೆಯಲ್ಲಿ ಆಸಕ್ತಿ ಹೊಂದಿರುವವರನ್ನು ಬೆಳೆಸಿ ಅವರ ಕಲೆಯನ್ನು ಸಮಾಜಕ್ಕೆ ನೀಡುತ್ತಿದೆ ಎಂದರು.

    ಗಾಳಿಪಟ ಮನಸ್ಸಿಗೆ ಸಂತೋಷ ನೀಡುವ ಕ್ರೀಡೆ, ಆಷಾಢದ ಏಕಾದಶಿಯಲ್ಲಿ ಮೊದಲು ಎಲ್ಲ್ಲೆಡೆ ಗಾಳಿಪಟದ ಹಾರಾಟವನ್ನು ನೋಡುತ್ತಿದ್ದೇವೆ. ಇದು ಮೊದಲು ಸಾರ್ವಜನಿಕರ ಹಬ್ಬವಾಗಿತ್ತು. ಇಂದು ಜನಪದ ಕ್ರೀಡೆಗಳಿಂದ ಜನರು ವಿಮುಖರಾಗುತ್ತಿದ್ದು, ಇಂದು ಸರ್ಕಾರದಿಂದ ಆಚರಿಸಲಾಗುತ್ತಿದೆ. ಜನಪದ ಕಲೆ ಹಾಗೂ ಕ್ರೀಡೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.

   ಗಾಳಿಪಟ ಹಾರಿಸಿದ ಅನುಭವ ಸಿಗುವುದು ಅದನ್ನು ಹಾರಾಟ ಮಾಡಿದಾಗ, ಬದುಕಿನ ಸುತ್ತ ಕಷ್ಟಗಳಿರುತ್ತವೆ. ಅದನ್ನು ಗೆಲ್ಲಲೂ ದ್ವೇಷ, ಅಸೂಯೆಯನ್ನು ದೂರವಿಟ್ಟು ತತ್ವ, ಸಿದ್ದಾಂತ ಎಂಬ ಸೂತ್ರವನ್ನು ರೂಢಿಸಿಕೊಂಡು ಜೀವನದ ಗಾಳಿಪಟ ಹಾರಿಸುವ ಕಲೆಗಾರರಾಗಬೇಕು. ಆಗ ಆಕಾಶದ ಯಾವುದೇ ಎತ್ತರಕ್ಕೂ ಏರಲು ಅಥವಾ ಬೆಳೆಯಲು ಸಾಧ್ಯ. ಸೂತ್ರ ಮುರಿದು ಹೋದರೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಗಳು ತಿಳಿಸಿದರು.

   ಗಾಳಿಪಟ ತುಂಬ ಹಳೆಯ ಕಾರ್ಯಚಟುವಟಿಕೆಯಾಗಿದ್ದು, ಯುವಕರು ಹಾಗೂ ವಯಸ್ಸಾದವರಿಗೆ ಉತ್ಸವ ತುಂಬುವ ಚಟುವಟಿಕೆ. ಮಕ್ಕಳ ಜೀವನದಲ್ಲಿ ಉಲ್ಲಾಸ, ಜಿಗಿಯುವ ಮತ್ತು ಮಹತ್ತರ ಸಾಧನೆ ಸಾಧಿಸುವ ಛಲವನ್ನು ಗಾಳಿಪಟ ತುಂಬುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷ ಇ.ಸಿ. ರಾಮಚಂದ್ರ ಅವರು ತಿಳಿಸಿದರು.

   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಪೂಜಾ ಕುಣಿತ, ಕಂಸಾಳೆ, ಪಟ ಕುಣಿತ, ಹುಲಿವೇಷ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಮಾರ್ಚ್ಫಾಸ್ಟ್ ನೊಂದಿಗೆ ಸ್ವಾಗತಿಸಿದರು.

    ಹೆಣ್ಣು ಭ್ರೂಣ ಹತ್ಯೆ ಅಪರಾಧ, ಪರಿಸರ ಉಳಿಸಿ, ಓಂ ಕಾರ, ಪುನೀತ ರಾಜ್ ಕುಮಾರ್, ಆದಿ ಚುಂಚನಗಿರಿ ಬಾಲಗಂಗಾಧರ ನಾಥ ಮಹಾಸ್ವಾಮೀಜಿ, ಆಂಜನೇಯ ಸ್ವಾಮಿ, ಸುಂದರ ಮಹಿಳೆ, ವಿವಿಧ ಪಕ್ಷಿ ಆಕೃತಿಯ ಪಟಗಳು ಸೇರಿದಂತೆ ವಿವಿಧ ಪಟಗಳನ್ನು ಹಾರಿಸಿದರು.

    ಕಾರ್ಯಕ್ರಮದಲ್ಲಿ, ಮಂಡ್ಯ ಶಾಸಕರಾದ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಎನ್, ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಉಪವಿಭಾಗಾಧಿಕಾರಿ ನಂದೀಶ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿ.ಎನ್ ಮಂಜೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap