ಕೊರಟಗೆರೆ : ಗೊರವನಹಳ್ಳಿ ಟ್ರಸ್ಟ್ ವತಿಯಿಂದ ದಾಸೋಹಕ್ಕೆ ಚಾಲನೆ

 ಕೊರಟಗೆರೆ : 

     ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯ ಸರ್ಕಾರದ ದಾರ್ಮಿಕ ದತ್ತಿ ಇಲಾಖೆಯಿಂದ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‍ಗೆ ಅಸ್ತಾಂತರಗೊಂಡ ಹಿನ್ನೆಲೆಯಲ್ಲಿ ಭಾನುವಾರ ಮಹಾಲಕ್ಷ್ಮಿ ದೇವಾಲಯದ ಮುಂದೆ ಲೋಕ ಕಲ್ಯಾರ್ಣಾರ್ಥವಾಗಿ ಸುದರ್ಶನ ಹೋಮ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

     ದೇವಾಲಯದ ಪ್ರಧಾನ ಅರ್ಚಕ ಹೆಚ್.ಸಿ ಪ್ರಸನ್ನಕುಮಾರ್ ದಿವ್ಯ ಸಾನಿಧ್ಯದಲ್ಲಿ ಹಲವು ಆಗಮಿಕರ ತಂಡದೊಂದಿಗೆ ಹಲವು ದಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ನಂತರ ಮಾತನಾಡಿ ಕಳೆದ 6 ವರ್ಷದಿಂದ ದೇವಾಲಯ ಧಾರ್ಮಿಕ ಧತ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಈಗ ಟ್ರಸ್ಟ್‍ಗೆ ಹಸ್ತಾಂತಗೊಂಡಿದ್ದು ಈಗ ಎಲ್ಲವೂ ಭಕ್ತರ ಸಹಕಾರದೊಂದಿಗೆ ಸುಸೂತ್ರವಾಗಿ ನಡೆಯಲಿ ಎಂದು ಮಾತೆ ಲಕ್ಷ್ಮಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.

      ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚಿಕ್ಕನರಸಯ್ಯ, ಧರ್ಮದರ್ಶಿಗಳಾದ ರಾಮಕೃಷ್ಣಯ್ಯ, ನರಸರಾಜು, ರಾಮಲಿಮಂಗಯ್ಯ, ಜಗದೀಶ್, ಲಕ್ಷ್ಮಿನರಸಯ್ಯ, ಬಿ.ಜಿ ವಾಸುದೇವ್, ರಂಂಗಶಾಮಯ್ಯ, ಪ್ರಧಾನ ಅರ್ಚಕ ಹೆಚ್.ಸಿ ಪ್ರಸನ್ನಕುಮಾರ್, ಕಾರ್ಯನಿರ್ವಹಣಾಧಿಕಾರಿ ಡಿ.ಎನ್ ರಮೇಶ್, ಮಾತೆ ಕಮಲ ಟ್ರಸ್ಟ್‍ದ ನಿರ್ದೇಶಕರಾದ ಶ್ರೀಪ್ರಸಾದ್, ಶ್ರೀಲಕ್ಷಿ, ಮಂಜುನಾಥ್, ಸಿಬ್ಬಂದಿಗಳಾದ ಕೇಶವಮೂರ್ತಿ, ಲಕ್ಷ್ಮಣ್, ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link