ಹಾವೇರಿ:
ನಿಲ್ಲಿಸಿದ್ದ ಕಂಟೇನರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಎನ್ ಹೆಚ್ 4ರಲ್ಲಿ ಸಂಭವಿಸಿದೆ.
ರಾಣೆಬೆನ್ನೂರಿನ ಕೋಟೆ ನಿವಾಸಿ ನರೇಂದ್ರಬಾಬು ಪಾಟೀಲ (52) ಮೃತ ವ್ಯಕ್ತಿ. ಪತ್ನಿ ಸುಮಾ (46) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
