ಕುಣಿಗಲ್ :
ಪುರಸಭೆಯ 2021 – 22ನೇ ಸಾಲಿನ ಆಯ-ವ್ಯಯ ಮಂಡನೆಯನ್ನು ಅಧ್ಯಕ್ಷ ಎಸ್ .ಕೆ ನಾಗೇಂದ್ರ ಅಧ್ಯಕ್ಷತೆಯ ಸಭೆಯಲ್ಲಿ ಮಂಡನೆ ಮಾಡಲಾಯಿತು.
ಈಬಾರಿ 36,90,138 ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.
ಪುರಸಭೆಯ 2021-22 ನೇ ಸಾಲಿನ ಆಯವ್ಯಯ ಮಂಡನೆಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಮಂಡಿಸಿ 31, 40, 85, 138, ಕೋಟಿ ರೂ ಗಳು ಈ ಸಾಲಿನ ಆದಾಯ ನಿರೀಕ್ಷೆ ಮಾಡಿದ್ದು ಇದರಲ್ಲಿ 31, 39,50 00 ರೂ ಪಾಯಿಗಳು ಖರ್ಚು ಆಗಲಿದ್ದು 36. 90, 138, ಉಳಿತಾಯ ಬಜೆಟ್ ಮಂಡನೆ ಮಂಡಿಸಿದರು.
ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 180 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಿದ್ದು. ನೀರು ಸಂಪರ್ಕದಿಂದ 66 ಲಕ್ಷ ನೆಲ ಸುಂಕದಿಂದ 33 ಲಕ್ಷ ಅಂಗಡಿಗಳಿಂದ 30 ಲಕ್ಷ ಉದ್ಯಮ ಪರವಾನಿಗೆ 85 ಲಕ್ಷ ರಾಜ್ಯ ಹಣಕಾಸು ಆಯೋಗದ ವೇತನದ ಅನುದಾನ 6 ಕೋಟಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ 200 ಲಕ್ಷ ವನ್ನು ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷ ಎಸ್ ಕೆ ನಾಗೇಂದ್ರ ಮಾತನಾಡುತ್ತಾ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಸ್ವಾಗತ ಫಲಕ ವಿದ್ಯುತ್ ಚಿತಾಗಾರ ಶವ ಅಂತಿಮ ಯಾತ್ರೆಯ ವಾಹನ, ಹೊಸದಾಗಿ ಶೌಚಾಲಯ ನಿರ್ಮಾಣ ನಗರವನ್ನ ಅರಣ್ಯಕರಣ ಅಭಿವೃದ್ಧಿಪಡಿಸುವುದು ಇನ್ನು ಹತ್ತು ಹಲವು ಯೋಜನೆಗಳನ್ನು ಈ ಕ್ರಿಯಾ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದರು. ಸದಸ್ಯರಾದ ರಂಗಸ್ವಾಮಿ ಮಾತನಾಡುತ್ತಾ ಪಟ್ಟಣದಲ್ಲಿ 10.80 ಆಸ್ತಿ ಖಾತೆದಾರರಿಗೆ ಇವರಿಂದ ಪುರಸಭೆಗೆ 6 ಕೋಟಿಗೂ ಹೆಚ್ಚು ಬಾಕಿ ಬರಬೇಕಾಗಿದೆ ಕೇವಲ 1.9 ಲಕ್ಷ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು ಕುಡಿಯುವ ನೀರಿಗೆ ಒಂದು ಕೋಟಿ 22 ಲಕ್ಷ ಖರ್ಚು ಮಾಡುತ್ತಿದ್ದು ಕೇವಲ 60 ಲಕ್ಷ ಆದಾಯ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಕಿಡಿಕಾರಿದರು ಸಂಪನ್ಮೂಲ ಕ್ರೋಡಿಕರಣಕ್ಕೆ ಅಧಿಕಾರಿಗಳು ಮುಂದಾಗಬೇಕು ಪರಿಶಿಷ್ಟ ಜಾತಿ ವರ್ಗ ಓಬಿಸಿ ಸೇರಿದಂತೆ ಹಿಂದುಳಿದ ವರ್ಗಗಳ ಶವಸಂಸ್ಕಾರಕ್ಕೆ ಪುರಸಭೆಯು 2500 ರೂ ನೀಡುತ್ತಿದ್ದು ಇದನ್ನು ಸಮರ್ಪಕವಾಗಿ ಮಾಡಿ ಸಕಾಲದಲ್ಲಿ ಪಾವತಿಸುವಂತೆ ತಿಳಿಸುತ್ತಾ ಅಭಿವೃದ್ಧಿಗೆ ಎಲ್ಲರ ಸಹಕಾರದಿಂದ ಆದಾಯ ಸೋರಿಕೆ ಆಗದಂತೆ ಕ್ರಮ ವಹಿಸಬೇಕಾಗಿದೆ ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಕಚೇರಿಯಲ್ಲಿ ಸದಸ್ಯರ ಸಮ್ಮುಖದಲ್ಲಿ ಆಚರಿಸಬೇಕೆಂದು ಕೋರುತ್ತಾ ಬಯಲು ರಂಗಮಂದಿರ ಕುಡಿಯುವ ನೀರು ಪರಿಸರ ಶವಸಂಸ್ಕಾರದ ವಾಹನ ಯೋಜನೆಗಳಿಗೆ ಸಮರ್ಪಕವಾದ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಒತ್ತಾಯಪಡಿಸಿದರು. ಸದಸ್ಯರಾದ ಕೆ ಎಸ್ ಕೃಷ್ಣ ಮಾತನಾಡಿ ಊರಿನ ಅಭಿವೃದ್ಧಿಗೆ ಎಲ್ಲಾ ಪ್ರಮುಖರ ಸಂಘ ಸಂಸ್ಥೆಗಳ ಸದಸ್ಯರ ಸಲಹೆ-ಸೂಚನೆಗಳನ್ನು ಪಡೆದು ಬಜೆಟ್ ಮಂಡನೆ ಮಾಡಬೇಕಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಟಡ್ ಫಾರಂನ 1. ಕೋಟಿ 20 ಲಕ್ಷಕ್ಕೂ ಹೆಚ್ಚು ಕಂದಾಯ ಬಾಕಿ ಇದೆ ಕೂಡಲೆ ವಸೂಲಿ ಮಾಡಿ ಎಂದು ಅರುಣ್ ಕುಮಾರ್ ಒತ್ತಾಯಿಸಿ ಕುದುರೆ ಸಾಕಾಣಿಕೆ ಕೇಂದ್ರದಿಂದ ಪುರಸಭೆಗೆ 1.20 ಲಕ್ಷ ರೂಪಾಯಿ ಆಸ್ತಿ ತೆರಿಗೆ ಬಾಕಿ ಇರುವುದರಿಂದ ಕೂಡಲೇ ವಸೂಲಿ ಮಾಡುವಂತೆ ಆಗ್ರಹಿಸಿ ಕಂದಾಯಾಧಿಕಾರಿ ಜಗರೆಡ್ಡಿಗೆ ತಾಖೀತು ಮಾಡಿದರು. ನೂತನವಾಗಿ ಪುರಸಭೆಗೆ ರಾಜ್ಯಸರ್ಕಾರದಿಂದ ಐದು ಜನರನ್ನು ನೇಮಿಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದವರನ್ನು ಸನ್ಮಾನಿಸಿ ಸ್ವಾಗತಿಸಿದರು.
ಬಿಜೆಪಿ ಸದಸ್ಯರ ಖಂಡನೆ ಈ ಬಜೆಟ್ ಸಂಪೂರ್ಣ ವಿಫಲವಾಗಿದೆ ಪಟ್ಟಣದ ಶ್ರೀಸಾಮಾನ್ಯರನ್ನು ಕಡೆಗಣಿಸಿದ್ದು ಪಟ್ಟಣದ ಅಭಿವೃದ್ಧಿ ಮರೆತಿರುವ ಇಲ್ಲಿನ ಪುರಸಭೆಯು ಯಾವುದೇ ರೀತಿಯ ಪೂರ್ವ ಪರ ಚಿಂತಿಸದೆ ಕಾಟಾಚಾರದ ಬಜೆಟ್ ಮಂಡಿಸಿದೆ ಎಂದು ವಿರೋಧ ಪಕ್ಷದ ಸದಸ್ಯ ಕೆ.ಎಸ್. ಕೃಷ್ಣ ಖಂಡಿಸಿದರು.
ಈ ಸಂಭರ್ದದಲ್ಲಿ ಉಪಾಧ್ಯಕ್ಷರಾದ ಮಂಜುಳಾ ರಂಗಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಸಮಿಉಲ್ಲಾ ಮುಖ್ಯಾಧಿüಕಾರಿ ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್, ಜಗರೆಡ್ಡಿ, ಸುಮಾ, ರೇಖಾ, ರೂಪ ಸೇರಿದಂತೆ ಭಾಗವಹಿಸಿದ್ದರು.