ಕುಣಿಗಲ್ :
ಹೋಂ ಐಸೋಲೇಟ್‍ಗೆ ಬದಲಾಗಿ ಪ್ರತಿ ಕೊರೋನಾ ರೋಗಿಯನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿಯೇ ಚಿಕಿತ್ಸೆ ನೀಡಬೇಕು ಇದಕ್ಕೆ ಇನ್ನೂ ಹೆಚ್ಚಿನ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದು ಸದಾ ಎಚ್ಚರಿಕೆಯಿಂದ ಕೊರೋನಾ ರೋಗಿಗಳನ್ನು ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಸಂಸದರು ಶಾಸಕರು ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ಕೋವಿಡ್ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತ ಇದುವರೆಗೂ ತಡವಾಗುತ್ತಿದ್ದ. ಕೊರೋನಾ ರಿಪೋರ್ಟ್ ಇನ್ನು ಮುಂದೆ 48 ಗಂಟೆಗಳಲ್ಲಿಯೆ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಹೊಂ ಐಸೋಲೇಟ್ ಮತ್ತು ಗ್ರಾಮ ಪಂಚಾಯಿತಿ ಹಾಸ್ಪಟ್ ಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ವೈದ್ಯರ ಸಮರ್ಪಕ ಕಾರ್ಯ ನಿರ್ವಾಹಣೆಯಾಗದ ಹಿನ್ನೆಲೆಯಲ್ಲಿ ಪ್ರತಿ ಕೊರೋನಾ ರೋಗಿಯನ್ನು 14 ರಿಂದ 10 ದಿನ ಕೋವಿಡ್ ಕೇರ್ ಸೆಂಟರ್ ನಲ್ಲಿರಿಸಿ ಚಿಕಿತ್ಸೆ ಕೊಡುವಂತೆ ಹಾಗೂ ಪ್ರೇಮರಿ ಕಂಟ್ಯಾಕ್ಟ್ ಅವರನ್ನು ಪರೀಕ್ಷೆಗೊಳಪಡಿಸ ಬೇಕೆಂದು ಸೂಚಿಸಿದರು. ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೆಮಿಡಿಸಿಯರ್ ಆಗಲಿ ಆಕ್ಸಿಜನ್ ಕೊರತೆಯಾಗಲಿ ಇಲ್ಲ ಇದನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದ ಅವರು ತಾಲ್ಲೂಕಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಂಡು ಕೋವಿಡ್ ಕೇರ್ ಸೆಂಟರ್‍ಗಳ ಬಗ್ಗೆ ನೋಡಿಕೊಳ್ಳಲು ತಹಸೀಲ್ದಾರ್ ಕಲ್ಯಾಣಿ ಯವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಸಚಿವರೊಂದಿಗೆ ಚರ್ಚಿಸಿ ಕ್ಷೇತ್ರದ ಜನರ ನೋವಿಗೆ ಸಮರ್ಪಕವಾಗಿ ಸ್ಪಂದಿಸುವ ದೃಷ್ಟಿಯಲ್ಲಿ ಹೆಚ್ಚಿನ ಆಕ್ಸಿಜನ್ ಬೆಡ್ ತುಂಬಾ ಅವಶ್ಯಕತೆ ಇದೆ. ಇನ್ನೂ ನಮಗೆ 50 ಬೆಡ್ ಮಾಡಿಕೊಡುವಂತೆ ಕೇಳಿದಾಗ ಇಡೀ ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ 50 ಕ್ಕೆ ಮೀಸಲಿಟ್ಟಿದೆ. ಆ ರೀತಿ ಮಾಡಲು ಆಕ್ಸಿಜನ್ ಕೊರತೆ ನಿಭಾಹಿಸಲು ಕಷ್ಟ ಎಂದರು ಅದಕ್ಕೆ ಸಂಸದ ಸುರೇಶ್ ಅವರು ನಾವು ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ನೀವು ಅದಕ್ಕಾಗುವಷ್ಟು ಎಲ್ಲಾ ಔಷಧ ವ್ಯವಸ್ಥೆ ಮಾಡಬೇಕೆಂದು ಕೇಳಿದರು ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿ ಜಿಲ್ಲಾಧಿಕಾರಿಗೆ ತಿಳಿಸಿದರು.
ಶಾಸಕ ಡಾ. ರಂಗನಾಥ್ ಆಸ್ಪತ್ರೆಯಲ್ಲಿ ವ್ಯವಸ್ಥಿತವಾದ ವೆಂಟಿಲೇಟರ್ ಇಲ್ಲ ಈಗ ಬಂದಿರುವ ಎರಡು ಉತ್ತಮ ಕ್ವಾಲಿಟಿ ಇಲ್ಲದ ಕಾರಣ ಅದರಿಂದ ಪ್ರಯೋಜನವಿಲ್ಲ ಹೊಸದಾಗಿ ಉತ್ತಮ ವೆಂಟಿಲೇಟರ್ ಹಾಗೂ ಆಕ್ಸಿಜನ್ ಮತ್ತು ರೆಮಿಡಿಸಿಯರ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಒತ್ತಾಯಿಸಿದ ಅವರು ಅದಕ್ಕಾಗಿಯೇ ಇಂದು ಆಸ್ಪತ್ರೆ ಮುಂದೆ ಉಪವಾಸ ಧರಣಿ ಮಾಡುತ್ತಿದ್ದೆ. ಇದನ್ನು ಕೈಬಿಡಲೇ ಎಂದು ಸಚಿವರ ಕಡೆನೋಡಿದರು ಅದಕ್ಕೆ ನಿಮ್ಮ ಆರೋಗ್ಯವೂ ಮುಖ್ಯ ಎಂದು ಹೇಳಿ ಈ ವ್ಯವಸ್ಥೆಯಲ್ಲಿ ಜನರ ಜೀವ ಉಳಿಸುವ ಕೆಲಸ ಎಲ್ಲರೂ ಮಾಡೋಣ ಎಂದ ಸಚಿವರು ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದನ್ನು ಶಾಸಕರು ಕೈ ಬಿಟ್ಟರು.
ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್, ಪಿ.ಎಲ್.ಡಿ ಬ್ಯಾಂಕ್ ರಾಜ್ಯಧ್ಯಕ್ಷ ಡಿ. ಕೃಷ್ಣಕುಮಾರ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್.ಪಿ.ವಂಶಿಕೃಷ್ಣ, ಸಿ.ಇ.ಒ. ವಿದ್ಯಾಕುಮಾರಿ, ಎ.ಸಿ ಅಜಯ್, ಡಿ.ಹೆಚ್.ಒ. ನಾಗೇಂದ್ರಪ್ಪ, ತಹಸೀಲ್ದಾರ್ ಕಲ್ಯಾಣಿ, ಡಿ.ವೈ.ಎಸ್ಪಿ. ರಮೇಶ್ , ಇ.ಒ ಜೋಸೆಪ್ ವೈದ್ಯಾಧಿಕಾರಿಗಳಾದ ಡಾ.ಗಣೇಶ್ ಬಾಬು, ಡಾ.ಜಗದೀಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
