ಧಾರವಾಡ:
ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವುದು ಸರ್ವೇಸಾಮಾನ್ಯ ಆದರೆ ಧಾರವಡದ ಪ್ರಶಾಂತ್ ನರ್ಸಿಂಗ್ ಹೋಮ್‌ನ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕ ಆಯೋಗವು ಸುಮಾರು 11 ಲಕ್ಷ ದಂಡ ವಿಧಿಸಿದೆ.
ನಗರದ ಭಾವಿಕಟ್ಟಿ ಲೇಔಟ್ ನಿವಾಸಿ ಪರಶುರಾಮ ಮತ್ತು ಪ್ರೀತಿ ದಂಪತಿಗೆ 2018ರಲ್ಲಿ ಹೆರಿಗೆ ಆಗಿದ್ದು ಮಗುವಿನ ಬೆಳವಣಿಗೆಯಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಹಕರ ನ್ಯಾಯಲಯಕ್ಕೆ ದೂರು ನೀಡಿದ್ದರು.
ಮಗು ಜನಿಸಿದ ನಂತರ, ದಂಪತಿ ನ್ಯಾಯಾಲಯದ ಮೆಟ್ಟಿಲೇರಿದರು, ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಮಗುವಿನ ಸ್ಥಿತಿಯನ್ನು ವೈದ್ಯರು ಬಹಿರಂಗಪಡಿಸಬೇಕಿತ್ತು ಎಂದು ಮೂವರು ನ್ಯಾಯಾಧೀಶರ ಪೀಠವು ಹೇಳಿದೆ. ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರಿಗೆ ತಿಳಿಯುತ್ತದೆ, ಸಮಸ್ಯೆ ಇದ್ದರೆ ಅದನ್ನು ತಿಳಿಸಬೇಕಿತ್ತು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
