ಬೆಳಗಾವಿ:
ರಾಜ್ಯ ರಾಜಕಾರಣದ ರೆಬೆಲ್ ಲೇಡಿ ಎಂದಿನಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜರಾಕಾರಣದ ಜೊತೆಗೆ ಇದೀಗ ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆ. ಅವರು ತಮ್ಮದೇ ಹೊಸ ಪ್ರೊಡಕ್ಷನ್ ಹೌಸ್ ತೆರಯಲು ಸಜ್ಜಾಗಿದ್ದಾರೆ. ಹೆಬ್ಬಾಳ್ಕರ್ ತಮ್ಮ ಮೊಮ್ಮಗಳ ಹೆಸರಿನಲ್ಲಿ ‘ಐರಾ ಪ್ರೊಡಕ್ಷನ್ ಹೌಸ್’ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ರಾಜಕಾರಣದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ತಮ್ಮ ವಿಶಿಷ್ಟ ಗುರುತು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಮೊಮ್ಮಗಳ ಹೆಸರಿನಲ್ಲಿ ‘ಐರಾ ಪ್ರೊಡಕ್ಷನ್ ಹೌಸ್’ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡಲು ಸಜ್ಜಾಗಿದ್ದಾರೆ. ಈ ಪ್ರೊಡಕ್ಷನ್ ಹೌಸ್‌ನಿಂದ ಎರಡು ಕನ್ನಡ ಚಿತ್ರಗಳು ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್, ಮತ್ತು ಡಾಲಿ ಧನಂಜಯ್ ಈ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎಂದು ಹೇಳಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಈ ಪ್ರೊಡಕ್ಷನ್ ಹೌಸ್‌ನ ಮೊದಲ ಯೋಜನೆಯಾಗಿ ಎರಡು ಕನ್ನಡ ಚಿತ್ರಗಳ ನಿರ್ಮಾಣ ಈಗಾಗಲೇ ಆರಂಭವಾಗಿದೆ ಎಂದು ಹೇಳಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಹೆಬ್ಬಾಳ್ಕರ್ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಸತತ ಎರಡು ಬಾರಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಇರುವ ಏಕೈಕ ಮಹಿಳೆಯಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹಾಗೂ ಸೊಸೆ ಹಿತಾ ಅವರ ಮಗಳೇ ಐರಾ. ಇದೇ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ತಲೆ ಎತ್ತಿದೆ. ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರ ಸ್ವೀಕಾರ ಮಾಡಿದ ದಿನವೇ ಅವರಿಗೆ ಮೊಮ್ಮಗಳು ಜನಿಸಿದ್ದಳು. ಈ ಕುರಿತು ಮಾತನಾಡಿದ್ದ ಸಚಿವೆ, ತನಗೆ ಡಬಲ್ ಖುಷಿ, ಮನೆಗೆ ಮಹಾಲಕ್ಷ್ಮೀ ಆಗಮನವಾಗಿದೆ ಎಂದು ಹೇಳಿದ್ದರು.
