ಲಿಂಗ ಪರಿವರ್ತನೆ ಮಾಡಿಕೊಂಡ ಟೀಮ್‌ ಇಂಡಿಯಾ ಕ್ರಿಕೆಟಿಗನ ಪುತ್ರ

ಲಂಡನ್‌:

    ಮಾಜಿ ಟೀಮ್ ಇಂಡಿಯಾ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರ ಹಿರಿಯ ಪುತ್ರ ಆರ್ಯನ್ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆರ್ಯನ್ ಆಗಿದ್ದ ಬಂಗಾರ್ ಪುತ್ರ ಇದೀಗ ಅನಯಾ ಆಗಿ ಬದಲಾಗಿದ್ದಾರೆ. ತನ್ನ ನಿರ್ಧಾರದ ಬಗ್ಗೆ ತುಂಬಾ ತೃಪ್ತಿಯಿದೆ ಎಂದು ಅನಯಾ ತಿಳಿಸಿದ್ದಾರೆ.

   ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡಿರುವುದಾಗಿ ಅನಯಾ ಹೇಳಿದ್ದಾರೆ.

   ಆರ್ಯನ್ ಬಂಗಾರ್ ಕೂಡ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದಾರೆ. ವಯೋಮಿತಿ ಆಧಾರ ಹಲವು ಕ್ರಿಕೆಟ್‌ ಪಂದ್ಯಗಳಲ್ಲಿಯೂ ಆರ್ಯನ್ ಪಂದ್ಯಗಳನ್ನಾಡಿ ಶತಕ ಕೂಡ ಬಾರಿಸಿದ್ದರು. ದೇಹದಲ್ಲಾದ ಪರಿವರ್ತನೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹುಡುಗಿಯಾಗಿ ಬದಲಾಗಿದ್ದಾರೆ. 

   ಸಂಜಯ್ ಬಂಗಾರ್ ಅವರು ಆಟಗಾರನಾಗಿದ್ದಕ್ಕಿಂತ ಕೋಚ್ ಆಗಿ ಗಮನ ಸೆಳೆದಿದ್ದು ಹೆಚ್ಚು. ಮಹಾರಾಷ್ಟ್ರದವರಾದ 52 ವರ್ಷದ ಸಂಜಯ್ ಬಂಗಾರ್ ಉತ್ತಮ ಆಲ್​ರೌಂಡರ್ ಎನಿಸಿದ್ದರು. ಟೀಮ್ ಇಂಡಿಯಾ ಪರ ಅವರು 2001ರಿಂದ 2004ರವರೆಗೆ 12 ಟೆಸ್ಟ್ ಹಾಗು 15 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಮಹಾರಾಷ್ಟ್ರ ಸಂಜಾತರಾದರೂ ಅವರು ದೇಶೀಯ ಕ್ರಿಕೆಟ್​ನಲ್ಲಿ ರೈಲ್ವೇಸ್ ಕ್ರಿಕೆಟ್ ಟೀಮ್​ನಲ್ಲಿ ಆಡಿ 8 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 

   ಕನಿಷ್ಠ ಎರಡು ವರ್ಷಗಳಿಂದ ಲಿಂಗ ಪರಿವರ್ತನೆಯ ಬಯಕೆಯನ್ನು ಹೊಂದಿರಬೇಕು. ವಯಸ್ಸು 18 ಮೀರಿರಬೇಕು ಮತ್ತು ಯಾವುದೇ ಅನುವಂಶೀಯ ಕಾಯಿಲೆ ಅಥವಾ ಮನೋವ್ಯಾಧಿಗಳಿರಬಾರದು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಂದ ಅನುಮತಿ ಪತ್ರ (ಇದನ್ನು ನೋಟರಿ ಅಥವಾ ನ್ಯಾಯಾಧೀಶರು ದೃಢೀಕರಿಸಿರಬೇಕು). ಸಂಗಾತಿ ಅಥವಾ ಪತಿ/ಪತ್ನಿಯಿಂದ ಸಮ್ಮತಿ ಅವಶ್ಯ. ಸ್ತ್ರಚಿಕಿತ್ಸೆಗೆ ಮೊದಲು ಕನಿಷ್ಠ ಮೂರು ತಿಂಗಳು ಆಪ್ತ ಸಮಾಲೋಚನೆ ಹಾಗೂ ಮನೋಚಿಕಿತ್ಸೆ ಪಡೆಯಬೇಕು.

Recent Articles

spot_img

Related Stories

Share via
Copy link