ಹಗರಿಬೊಮ್ಮನಹಳ್ಳಿ:
ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸಬನ್ನಾಗಿ ತೊಡಗಿಸಿಕೊಂಡರೆ ಅಂತಹ ರೈತರು ಆರ್ಥಿಕವಾಗಿ ಸಬಲರಾಗುವ ಮೂಲಕ ಜೀವನದಲ್ಲಿ ಚೇತರಿಕೆ ಕಾಣಲು ಸಾಧ್ಯವೆಂದು ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ರಾ.ಕೊ.ಬ.ಯ ಉಪಾಧ್ಯಕ್ಷರಾದ ಡಿ.ಕೊಟ್ರೆಶ್ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ಉತ್ಸವದಲ್ಲಿ ನಡೆದ ಪೂರಕ ಉದ್ಯಮವಾಗಿ ಹೈನುಗಾರಿಕೆ ಉಪನ್ಯಾಸದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಜವಾಬ್ದಾರಿಯಿಂದ ನಿರ್ವಹಿಸಿದರೆ ಲಾಭ ಖಚಿತವಾಗಿದೆ. ಮನೆಯ ಕುಟುಂಬದವರೆಲ್ಲ ಸೇರಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೆಕಾಗುತ್ತೆ. ಇದರಲ್ಲಿ ರೈತ ಮಹಿಳೆಯರು ಶ್ರಮಕೂಡ ಫಲಪ್ರದವಾಗಿರುತ್ತೆ ಎಂದರು.
ಒಕ್ಕೂಟದ ಉಪ ವ್ಯವಸ್ಥಾಪಕರಾದ ಈ.ಪ್ರಕಾಶ್ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾಲು ಉತ್ಪಾದನೆಮಾಡಬಹುದು, ಹೈನುಗಾರಿಕೆ ಹೆಚ್ಚು ಪ್ರೋತ್ಸಹಿಸಲು ಹೆಣ್ಣು ಕರುಗಳ ಸಂರಕ್ಷಣೆ ಮಾಡಬೇಕು, ಬರಗಾಲದ ಹಿನ್ನೆಲೆಯಲ್ಲಿ ಒಣಮೇವು ಸಂಗ್ರಹ ಮತ್ತು ಹಸಿರು ಮೇವು ಉತ್ಪಾದನೆಯಿಂದ ಹೆಚ್ಚು ಹಾಲನ್ನು ಪಡೆಯಬಹುದು ಎಂದರು.
ಮಾದರಿ ಹೈನುಗಾರರಾದ ಬಾಚಿಗೊಂಡನಹಳ್ಳಿಯ ಪಿ.ಬಸವರಾಜ್ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಸಂಘಟನೆಯ ಕೃಷಿ ಮೇಲ್ವಿಚಾರಕರು ಎಂ.ಕೆ. ಅರುಣ್ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ