ಹಿರೇಕೆರೂರ :
ಪಟ್ಟಣದ ಶ್ರೀ ತೋಂಟದ ಮತ್ತು ಕೋಟೆಯ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಮತ್ತು ಕಾರ್ತಿಕ ಮಹೋತ್ಸವ ಅತಿ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದ ಗುಗ್ಗಳದ ಸೇವಾ ಸಮಿತಿಯಿಂದ ಶ್ರೀ ಪ್ರಶಾಂತಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮತ್ತು ಕಾಳಿಕಾದೇವಿಯ ರುದ್ರಾಭಿಷೇಕ ಹಾಗೂ ಹೂವಿನ ಅಲಂಕಾರ ನೆರವೇರಿತು.ಜಿಲ್ಲಾ ಮತ್ತು ಸಂಸ್ಕೃತ ಇಲಾಖೆ ಯಿಂದ ಆಯೋಜಿಸಿದ್ದ ಆಲದಕಟ್ಟಿಯ ಗದಿಗೆಪ್ಪ ತಾವರಗಿ ಸಂಗಡಿಗರಿಂದ ಶ್ರೀ ವೀರಭದ್ರೇಶ್ವರ ದೇವರ ಶರಬಿ ಗುಗ್ಗಳ ಹಾಗೂ ಪಾಲಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ನಂತರ ಅನ್ನಸಂತರ್ಪಣೆ ಹಾಗೂ ಸಂಜೆ ಕಾರ್ತಿಕೋತ್ಸವ ನೆರವೇರಿತು.ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಪದಾದಿಕಾರಿಗಳು, ಪಟ್ಟಣದ ಗಣ್ಯ ವ್ಯಕ್ತಿಗಳು, ಭಕ್ತಾದಿಗಳು, ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








