ಬರಗಾಲದಲ್ಲಿ ಹೈನುಗಾರಿಕೆ ರೈತರ ಕೈಹಿಡಿಯಲಿದೆ : ವೆಂಕಟರಮಣಪ್ಪ

ಪಾವಗಡ

        ಬರಗಾಲದಲ್ಲಿ ಹೈನುಗಾರಿಕೆ ರೈತರ ಕೈಹಿಡಿಯಲಿದೆ ಇದರ ಉಪಯೋಗವನ್ನು ರೈತರು ಪಡೆಯಬೇಕೆಂದು ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.

        ತಾಲ್ಲೂಕಿನ ಕುರುಬರಹಳ್ಳಿ ಬಳಿಯ ಇರುವಾ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಸ್ರೀಶಕ್ತಿ ಸಂಘಗಳಿಗೆ ಹಾಗೂ ರಾಸುಗಳಿಗೆ ಸಾಲಸೌಲಭ್ಯ ಮತ್ತು ನೂತನ ನಿದರ್ಶಕರ ಅಭಿನಂದನಾ ಸಮಾರಂಭ ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಸಚಿವರು ಶಾಶ್ವತ ಬರಪೀಡಿತ ಪ್ರದೇಶದವಾದ ಪಾವಗಡದಲ್ಲಿ ಸಾವಿರಾರು ರೈತರು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದು , ರೈತರು ಇದರ ಸದುಪಯೋಗ ಪಡೆದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಬೇಕಾದ ಜವಾಬ್ದಾರಿ ಹೊಂದಬೇಕಾಗಿದೆ ಎಂದರು.

        ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‍ಗಳ ವತಿಯಿಂದ 70 ಕೋಟಿ ಸಾಲಮನ್ನ ಹಾಗೂ 70 ಕೋಟಿ ಹೊಸ ಸಾಲನೀಡಿದ ಆಪೆಕ್ಸ್ ಬ್ಯಾಂಕ್ ಅದ್ಯಕ್ಷರನ್ನು ಮಧುಗಿರಿಯಲ್ಲಿ ಸೋಲಿಸಿದ್ದು ದುರಂತವೆಂದ ಅವರು ಜಿಲ್ಲೆಯಲ್ಲಿ ಮಧುಗಿರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ರಾಜಣ್ಣ ಮಾಡಿದ್ದು ಮಾಡಲು ಈಗ ಏನು ಉಳಿದಿಲ್ಲ ಎಂದರು.

        ತಾಲ್ಲೂಕಿನ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ಗ್ರಾಮ ಪಂಚಾಯಿತಿಯಿಂದ ಉದ್ಯೋಗಿ ಖಾತ್ರಿ ಯೋಜನೆಯಲ್ಲಿ ಕೂಲಿ ನೀಡಬೇಕೆಂದು ಆದೇಶ ನಿಡಿದ್ದು,ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಉದ್ಯೋಗ ನೀಡಲು ಮುಂದಾಗ ಬೇಕಾಗಿದೆ ಎಂದು ತಿಳಿಸಿದರು.
ಅಪೆಕ್ಸ್ ಬ್ಯಾಂಕ್ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣ ರವರು ಕಾರ್ಯಕ್ರಮ ಉದ್ಘಾಟಿಸಿ ಮತ್ತು ನಲವತ್ತು ಲಕ್ಷ ವ್ಯೆಚ್ಚದ ನಂದಿನಿ ಕ್ಷೀರ ಭವನದ ತಡೆಗೋಡೆಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲಪಡೆದ ರೈತ ಮೃತಪಟ್ಟರೆ ಬ್ಯಾಂಕ್‍ನಿಂದ ಒಂದು ಲಕ್ಷ ಹಣ ವಿಮೆ ಬರೆಸುವ ಯೊಜನೆಯನ್ನು ರೂಪಿಸಿ ದೇಶಕ್ಕೆ ಮಾದರಿ ಕಾರ್ಯಾಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದೆ ಎಂದರು.

          ಸಹಕಾರಿ ಸಂಘಗಳ ಸ್ಥಾಪನೆಯಿಂದ ಹೈನುಗಾರಿಕೆಯಲ್ಲಿ ಆರ್ಥಿಕ ಆಬಿವೃದ್ದಿ ವೃದಿಯಾಗಲು ಸಾದ್ಯವಾಗಿದ್ದು,ಸಾಲಮನ್ನ ಸೌಲಭ್ಯ ಪಡೆಯದಾ ಹಾಗೂ ಸಹಕಾರಿ ಬ್ಯಾಂಕ್‍ನಲ್ಲಿ ಸಾಲ ಪಡೆಯದಾ ರೈತರಿಗೂ ಕೂಡ ಸಾಲ ನೀಡಲಾಗಿದ್ದು,ನೀರು ಮತ್ತು ಮೇವಿನ ಸೌಲಭ್ಯವಿರುವಾ ರೈತರು ಸಾಲಸೌಲಭ್ಯ ಪಡೆಯಬಹುದೆಂದಾ ಅವರು ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

          ಚಿತ್ರದುರ್ಗ ಲೋಕಸಭ ಸದಸ್ಯರಾದ ಚಂದ್ರಪ್ಪರವರು ಮಾತನಾಡಿ ಅಂತರ್ಜಲ ಮಟ್ಟ ಕುಸಿತದ ನಡುವೆ ಹೈನುಗಾರಿಕೆಯಿಂದ ಸುಖಿ ಜೀವನ ನಡೆಸಬಹುದು, ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಾ ಸಲುವಾಗಿ ಲಕ್ಕವಳ್ಳಿ ಬಳಿ ಏಳು ಬಾರಿ ಅಧಿಕಾರಿಗಳ ಸಬೆ ನಡೆದಿದ್ದು,ಆಡೆತಡೆಗಳನ್ನು ನಿವಾರಣಿ ಮಾಡಿ ಆಲ್ಲಿನ ಆಧಿಕಾರಿಗಳಿಗೆ ಕಾರ್ಮಿಕ ಸಚಿವರು ಚಳಿ ಬಿಡಿಸಿ ಕಾಮಗಾರಿಯನ್ನು ವೇಗ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಿದರು.

          ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅದ್ಯಕ್ಷರಾದ ಸಿ.ವಿ.ಮಹಲಿಂಗಯ್ಯರವರು ಮಾತನಾಡಿ ಪ್ರಬ್ರವರಿ ಒಂದರಿಂದ ಪ್ರತಿ ಲೀಟರ್‍ಗೆ ಒಂದು ರೂಪಾಯಿ ಮೂವತ್ತು ಪೈಸೆ ಹೆಚ್ಚಳ ಮಾಡುವುದಾಗಿ ತಿಳಿಸಿ, ಒಕ್ಕೂಟ ಪ್ರಗತಿಯನ್ನು ವಿವರಿಸಿದರು.

          ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೂಕಿನ ನೂತನ ನಿದರ್ಶಕರಾದ ಚನ್ನಮಲ್ಲಪ್ಪ ಹಾಗೂ ಇತರೆ ನಿದರ್ಶಕರನ್ನು ಸನ್ಮಾನಿಸಲಾಯಿತ್ತು.

         ಈ ಸಂದರ್ಭದಲ್ಲಿ ತಾ.ಪಂ.ಅದ್ಯಕ್ಷರಾದ ಸೊಗಡು ವೆಂಕಟೇಶ್ , ಒಕ್ಕೂಟದ ನಿದರ್ಶಕರಾದ ನರಸಿಂಹಯ್ಯ ,ಎಸ್.ಆರ್.ಗೌಡ ,ಎಂ.ಕೆ.ಪ್ರಕಾಶ್ , ವ್ಯೆವಸ್ಥಾಪಕ ನಿದರ್ಶಕರಾದ ಮುನೇಗೌಡ ,ಸಹಕಾರಿ ಆಭಿವೃದ್ದಿ ಆಧಿಕಾರಿ ಎಸ್.ಸಿ.ಸೌಮ್ಯ , ಮೇಲ್ವಿಚಾರಕ ಸೀನಪ್ಪ , ವಿ.ಎಸ್.ಎಸ್.ಎನ್.ಕಾರ್ಯಾದರ್ಶಿಗಳಾದ ನಾರಾಯಣಮೂರ್ತಿ,ನಾಗಭೂಷಣ,ವಿಸ್ತರಣಾಧಿಕಾರಿ ರಂಜಿತ್ ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link