ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ…!!!

ಬೆಂಗಳೂರು

      ವಿವಾಹಕ್ಕೆ ಯುವತಿಯೊಬ್ಬರು ಒಪ್ಪದಿದ್ದರಿಂದ ನೊಂದ ಆಟೋ ಚಾಲಕನೊಬ್ಬ ಮದ್ಯದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

        ಆತ್ಮಹತ್ಯೆ ಮಾಡಿಕೊಂಡವರನ್ನು ಹುಣಸಮಾರನಹಳ್ಳಿಯ ತೀರ್ಥ ಕುಮಾರ್ (37) ಎಂದು ಗುರುತಿಸಲಾಗಿದೆ.ಅಪೇ ಲಗೇಜ್ ಆಟೋ ಚಾಲಕರಾಗಿದ್ದ ತೀರ್ಥ ಕುಮಾರ್ ಸೊಣ್ಣಪ್ಪನಹಳ್ಳಿಯ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದರು.
ಆಕೆಯನ್ನು ಪ್ರೀತಿಸುತ್ತಿದ್ದ ತೀರ್ಥ ಕುಮಾರ್ ವಿವಾಹ ಮಾಡಿಕೊಡುವಂತೆ, ಯುವತಿಯ ಕುಟುಂಬದವರಿಗೆ ದುಂಬಾಲು ಬಿದ್ದಿದ್ದ. ಆದರೆ ಯುವತಿ ಹಾಗೂ ಮನೆಯವರು ಒಪ್ಪಿರಲಿಲ್ಲ.

         ಇದರಿಂದ ಮನನೊಂದ ತೀರ್ಥ ಕುಮಾರ್ ರಾತ್ರಿ 8.30ರ ವೇಳೆ ಯುವತಿಯ ಮನೆಯ ಸಮೀಪವೇ ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link