ಬದುಕಿನ ಭಾವನೆ ಬಿಟ್ಟು ಸಮಾಜಾಭಿವೃದ್ಧಿ ಶ್ರಮಿಸಬೇಕಿದೆ

ಹೂವಿನಹಡಗಲಿ :

       ಸ್ವಾಮೀಜಿಯಾದವರು ತಮ್ಮ ವೈಯಕ್ತಿಕ ಬದುಕಿನ ಭಾವನೆಗಳನ್ನು ತ್ಯಾಗ ಮಾಡಿ ಮಠಗಳು ಮತ್ತು ಸಮಾಜಾಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

       ಪಟ್ಟಣದ ಗವಿಸಿದ್ದೇಶ್ವರ ಮಠದ 24 ನೇ ವರ್ಷದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಗೆ ಚಾಲನೆ ನೀಡಿ ಮಾತನಾಡಿ, ಸಮಾಜದ ಸದ್ಭಕ್ತರು, ನಮಗೆ ಗುರುತರವಾದ ಸ್ಥಾನ ಕಲ್ಪಿಸಿ ಕೊಟ್ಟಿರುವ ಜತೆಗೆ ಅವರ ತನು ಮನ ಧನ ಸೇವೆಯ ಫಲವೇ ಈ ಜಾತ್ರೆ ನಡೆಯುತ್ತಿದ್ದು, ಇಡೀ ಸಮಾಜ ನಮ್ಮನ್ನು ತಮ್ಮ ಮನೆಯ ಮಗನಾಗಿ ಪ್ರೀತಿ ತೋರಿಸಿದ್ದೀರಿ ಎಂದು ಭಾವುಕರಾದರು.

        ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ವರದಿಗಾರ್ತಿ ಅರುಣಾ ಸಿರಗುಪ್ಪಿ, ಮಲ್ಲಿಗೆ ನಾಡು ಹೂವಿನಹಡಗಲಿ ಪುಣ್ಯ ಭೂಮಿಯಾಗಿದ್ದು, ಗವಿಸಿದ್ದೇಶ್ವರ ಸೇರಿದಂತೆ ಅನೇಕ ಸಾಧು ಸಂತರ ಪುಣ್ಯ ಪುರುಷರು ಸಾಧನೆ ಮಾಡಿದ್ದಾರೆ. ಜತೆಗೆ ಶ್ರೀಮಠದ ಶ್ರೀಗಳು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ, ಅಕ್ಷರ, ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದಾರೆ ಎಂದರು.

        ಇಂದು ವೆಬ್‍ಸೈಟ್‍ಗಿಂತ ಇನ್‍ಸೈಟ್ ಮುಖ್ಯವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಜತೆಗೆ ಇ-e್ಞÁನಕ್ಕಿಂದ ಸುe್ಞÁನದ ಅರಿವು ಹೊಂದಬೇಕಿದೆ. ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಜನಾಂಗ ಶ್ರಮಿಸಬೇಕಿದೆ. ಜೀವನದಲ್ಲಿ ಚಿಂತೆಗಿಂತ ಉತ್ತಮ ಶರಣ ಚಿಂತನಗಳನ್ನು ಅಳವಡಿಸಿಕೊಂಡು, ವ್ಯಕ್ತಿ ಪ್ರೀತಿಗಿಂತ ವ್ಯಕ್ತಿತ್ವ ಪ್ರೀತಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

        ಪಾಲಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ತಕ್ಕ ಶಿಕ್ಷಣ ಕೊಡಿಸಿ ಜತೆಗೆ ಮಠ ಮಾನ್ಯಗಳಿಗೆ ಸಂಪರ್ಕ ಬೆಳೆಸಿ ಸತ್ಸಂಗದ ಮೂಲಕ ಉತ್ತಮ ಸಂಸ್ಕಾರ ಕೊಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕರಿಶೆಟ್ಟಿ ಶಿವಕುಮಾರ ವಿವಾಹದ 50ನೇ ವರ್ಷದ ನೆನಪಿಗಾಗಿ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರದಿಗಾರ್ತಿ ಅರುಣಾ ಸಿರಗುಪ್ಪಿ ಮತ್ತು ರಂಗಭೂಮಿ ಕಲಾವಿದೆ ಸೋಗಿ ನಾಗರತ್ನ ಶ್ರೀಮಠದಿಂದ ಸನ್ಮಾನಿಸಲಾಯಿತು.

     ಪುಟ್ಟರಾಜ ಗುರುಗಳ ಶಿಷ್ಯ ಪಂಚಾಕ್ಷರ ಶಾಸ್ತ್ರಿ ಕುರುಬಗೊಂಡ ಇವರಿಂದ ಶ್ರೀ ಗುಡದೂರು ದೊಡ್ಡ ಬಸವಾರ್ಯರ ಜೀವನ ಚರಿತ್ರೆ ಧರ್ಮ ಪ್ರವಚನಕ್ಕೆ ಚಾಲನೆ ನೀಡಿದರು. ಸೇವಾರ್ಥಿ ಸರ್ವ ದಾನಿಗಳಿಗೆ ಗೌರವಿಸಿದರು. ಪಿ.ಎಂ.ದೊಡ್ಡಬಸಯ್ಯ, ಕರೆಶೆಟ್ಟಿ ಶಿವಕುಮಾರ, ಸಿ.ಕೆ.ಶಿವಕುಮಾರ ಸೇರಿದಂತೆ ಇತರರಿದ್ದರು.ಗವಿಮಠದ ಗವಿಶ್ರೀ ಅಕ್ಕನ ಬಳಗದವರು ಪ್ರಾರ್ಥಸಿದರು. ಡಾ.ಎಚ್.ಕೆ. ಮಹೇಶ್ ಸ್ವಾಗತಿಸಿದರು. ಡಾ.ಶೈಲಜ ಪವಾಡಿ ಶೆಟ್ರು, ಸವಿತಾ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link