ಬೆಂಗಳೂರು
ಸರ್ವೀಸ್ ಸೆಂಟರ್‍ಗಳಲ್ಲಿ ಆನ್‍ಲೈನ್‍ಗಳಲ್ಲಿ ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳನ್ನು ಖರೀದಿಸುವುದಾಗಿ ತರಿಸಿಕೊಂಡು ಹಣ ನೀಡದೆ ವಂಚಿಸಿ ಪರಾರಿಯಾಗುತ್ತಿದ್ದ ಮೂವರನ್ನು ಸಂಪಿಗೆಹಳ್ಳಿ ಪೆÇಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಕೆಜಿ ಹಳ್ಳಿಯ ಕುಶಾಲನಗರದ ರಿಜ್ವಾನ್ ಅಲಿಯಾಸ್ ಅಬ್ದುಲ್ ರಿಜ್ವಾನ್ (28), ವಿನೋಬಾ ನಗರದ ಆಲಂಶೇಖ್ ಆಲಿಯಾಸ್ ಆಲಂ (25) ಹಾಗೂ ಕಮ್ಮನಹಳ್ಳಿಯ ಸೈಫ್ ಪಾಷ ಅಲಿಯಾಸ್ ಸೈಫ್ (22) ಬಂಧಿತ ಆರೋಪಿಗಳಾಗಿದ್ದಾರೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಂದಿದ್ದ ಆರೋಪಿ ರಿಜ್ವಾನ್ ಬಂದಿತ ಇಬ್ಬರು ಸೇರಿ ಮೂವರ ಜೊತೆ ಗ್ಯಾಂಗ್ ಕಟ್ಟಿಕೊಂಡು ಕೃತ್ಯವೆಸಗಿ ಮೋಜು ಮಾಡುತ್ತಿದ್ದ.
ಗ್ಯಾಂಗ್ ನಲ್ಲಿದ್ದು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗಿದೆ,ಆರೋಪಿಗಳಿಂದ 10.2 ಲಕ್ಷ ಮೌಲ್ಯದ 16 ಕಂಪ್ಯೂಟರ್‍ಗಳು, 3 ಲ್ಯಾಪ್‍ಟಾಪ್‍ಗಳು, ಮೊಬೈಲ್, ಪಲ್ಸರ್ ಬೈಕ್‍ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಕಳೆದ ನ. 16 ರಂದು ಸಂಪಿಗೆಹಳ್ಳಿಯ ಉಲ್ಲಾಸ್ ಎಂಟರ್‍ಪ್ರೈಸಸ್ ಎನ್ನುವ ಲ್ಯಾಪ್‍ಟಾಪ್ ಸರ್ವೀಸ್ ಮತ್ತು ಸೇಲ್ಸ್ ಅಂಗಡಿಗೆ ಆರೋಪಿಗಳು ಹೋಗಿ ಮಾಲೀಕ ಸುಭಾಷ್ ಚಂದ್ರ ಜತೆ ಮಾತುಕತೆ ನಡೆಸಿ 4 ಲ್ಯಾಪ್‍ಟಾಪ್‍ಗಳು ಬೇಕಿದ್ದು,ಅವುಗಳನ್ನು ಮಾನ್ಯತಾ ಟೆಕ್ ಪಾರ್ಕ್‍ಗೆ ಕಳುಹಿಸಿದರೆ ಹಣ ಕಳುಹಿಸುವುದಾಗಿ ಹೇಳಿ ಹೋಗಿದ್ದರು.
ಅದರಂತೆ ಸುಭಾಷ್‍ಚಂದ್ರ ಅವರು 4 ಲ್ಯಾಪ್‍ಟಾಪ್‍ಗಳನ್ನು ಮಾನ್ಯತಾ ಟೆಕ್‍ಪಾರ್ಕ್ ಬಳಿ ತೆಗೆದುಕೊಂಡು ಬಂದಾಗ ಅವುಗಳನ್ನು ತೆಗೆದುಕೊಂಡು ಕಂಪನಿಯಲ್ಲಿ ತೋರಿಸಿ ಹಣ ತೆಗೆದುಕೊಂಡು ಬಂದು ನೀಡುವುದಾಗಿ ಒಳಗಡೆ ಹೋಗಿ ಪರಾರಿಯಾಗಿದ್ದರು.
ಈ ಸಂಬಂಧ ಸುಭಾಷ್‍ಚಂದ್ರ ಅವರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಸಂಪಿಗೆಹಳ್ಳಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಮೈಕೋಲೇಔಟ್‍ನಲ್ಲಿ ಖರೀದಿಸುವುದಾಗಿ 16 ಕಂಪ್ಯೂಟರ್‍ಗಳನ್ನು ಪಡೆದು ಹಣ ನೀಡದೆ ಪರಾರಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿ ಅಬ್ದುಲ್ ರಿಜ್ವಾನ್ ಹಿಂದೆ ಕಳವು ಪ್ರಕರಣದಲ್ಲಿ ಭಾಗಿಯಾಗಿ ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಇನ್ನಿಬ್ಬರು ಆರೋಪಿಗಳಲ್ಲದೆ ಮೂವರ ಜತೆ ಸೇರಿ ಆನ್‍ಲೈನ್‍ನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಬುಕ್ ಮಾಡಿ ಪಡೆದ ನಂತರ ವಂಚನೆ ಮಾಡಿರುವುದೂ ಸೇರಿದಂತೆ ನಾಲ್ಕೈದು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
