ಬೆಂಗಳೂರು
ಸರಿಯಾದ ಸಮಯಕ್ಕೆ ಮನೆ ಬಾಡಿಗೆ ಕೂಡುವಂತೆ ಒತ್ತಡ ಹಾಕುತ್ತಿದ್ದ ಮಾಲೀಕನನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿರುವ ದುರ್ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾಸಿಪಾಳ್ಯದ ಬಳಿ ಗುರುವಾರ ರಾತ್ರಿ ನಡೆದಿದೆ.
ಕೊಲೆಯಾದವರನ್ನು ವಿಜಯನಗರದ ಆರ್‍ಪಿಸಿ ಲೇಔಟ್‍ನ ಶಾಂತಿಲಾಲ್ ಮಂಡೋತ್ ಜೈನ್ (62)ಎಂದು ಗುರುತಿಸಲಾಗಿದೆ . ಮಂಡೋತ್ ಜೈನ್ ಅವರನ್ನು ಕೊಲೆಗೈದು ಮೃತದೇಹವನ್ನು ಎಸೆದು ಹೋಗಿರುವ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಕೆಂಗೇರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ಲಾಸ್ಟಿಕ್ ಚೇರ್ ಉದ್ಯಮ ನಡೆಸುತ್ತಿದ್ದ ಜೈನ್ ಅವರ ಮನೆಯನ್ನು ಇಸ್ಲಾಮ್ ಪಾಶ ಎಂಬಾತ ಬಾಡಿಗೆ ಪಡೆದುಕೊಂಡಿದ್ದು ಸರಿಯಾಗಿ ಮನೆ ಬಾಡಿಗೆ ಕೊಡದೆ ಮಾಲೀಕರನ್ನು ಸತಾಯಿಸುತ್ತಿದ್ದ ಸರಿಯಾಗಿ ಬಾಡಿಗೆ ಕೊಡುವುದಾದರೆ ಮನೆಯಲ್ಲಿರು ಇಲ್ಲವೇ ಖಾಲಿ ಮಾಡಿಕೊಂಡು ಹೋಗು ಎಂದು ರಮೇಶ್‍ಜೈನ್ ಒತ್ತಡ ಹಾಕಿದ್ದರು.
ಬಾಡಿಗೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಜಗಳದಿಂದ ಆಕ್ರೋಶಗೊಂಡ ಇಸ್ಲಾಮ್ ಪಾಶ ರಾತ್ರಿ ಮನೆ ಬಳಿ ಬಂದಿದ್ದ ಜೈನ್ ಅವರನ್ನು ಕೊಲೆ ಮಾಡಿ ಅವರ ಶವವನ್ನು ಕೆಂಗೇರಿಯ ದುಬಾಸಿಪಾಳ್ಯದ ರೈಲ್ವೆ ಪ್ಯಾರಲಲ್ ರಸ್ತೆ ಬಳಿ ಬಿಸಾಕಿ ಹೋಗಿದ್ದ.
ರಾತ್ರಿ 9ರ ವೇಳೆ ಶವ ಬಿದ್ದಿರುವುದನ್ನು ಕಂಡು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಕೆಂಗೇರಿ ಪೊಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಗುತ್ತೇರ್ ಅವರು ಪ್ರಕರಣ ದಾಖಲಿಸಿ ಕೃತ್ಯವೆಸಗಿದ ನಾಲ್ವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
