ಶಿವಾಜಿ ನಗರದಲ್ಲಿ ಟಿಪ್ಪು ಸುಲ್ತಾನ ಜಯಂತಿ

ಹಾವೇರಿ :

        ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇಂದು ಶಿವಾಜಿ ನಗರದಲ್ಲಿ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕರಾದ ಐ.ಎ.ಬುಡಂದಿ ಮಾತನಾಡಿ ಟಿಪ್ಪು ಸುಲ್ತಾನ ಒಬ್ಬ ಅಪ್ಪಟ ದೇಶಪ್ರೇಮಿ, ದೇಶದ ಸ್ವಾತಂತ್ರ್ಯ ಚಳುವಳಿಗೆ ಬ್ರಿಟಿಷರ ವಿರುದ್ಧ ನಡೆದ ಚಳುವಳಿಯಲ್ಲಿ ಯುದ್ಧ ಭೂಮಿಯಲ್ಲೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು ಎಂದರು.’

         ಟಿಪ್ಪು ಸುಲ್ತಾನ ಸರ್ವಧರ್ಮ ಪ್ರೇಮಿಯಾಗಿದ್ದರು. ಟಿಪ್ಪುವಿನನ್ನು ಮತಾಂಧನೆಚಿದು ಇಚಿದು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಿಂಬಿಸುತ್ತಿದ್ದಾರೆ. ಆದರೆ ಟಿಪ್ಪು ಮತಾಂಧನಾಗಿದ್ದರೆ ಟಿಪ್ಪುವಿನ ಆಡಳಿತಾವಧಿಯಲ್ಲಿ ಯಾವುದೇ ಮಠಗಳು ದೇವಸ್ಥಾನಗಳು ಅಭಿವೃದ್ಧಿ ಆಗುತ್ತಿರಲಿಲ್ಲ ಎಂದರು.

             ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ಟಿಪ್ಪು ಸುಲ್ತಾನ ಹೆಸರು ಕೇಳಿದರೆ ಬ್ರಿಟಿಷರಿಗೆ ನಡುಕ ಉಂಟಾಗುತ್ತಿತ್ತು. ಬ್ರಿಟಿಷರ ಪಾಲಿಗೆ ಟಿಪ್ಪು ನುಂಗಲಾರದ ತುತ್ತಾಗಿದ್ದನ್ನ ಅರಿತ ಬ್ರಿಟಿಷರು ಟಿಪ್ಪುವನ್ನು ಮೋಸ ವಂಚನೆಯಿಂದ ಸೋಲಿಸಲು ಮುಂದಾದರು. ಟಿಪ್ಪುವನ್ನು ಹಿಂದು ವಿರೋಧಿ ಎಂದು ಹಲವರು ಬಿಂಬಿಸುತ್ತಿದ್ದಾರೆ ಆದರೆ ಟಿಪ್ಪುವಿನ ಸೇನೆಯಲ್ಲಿ ಆರ್ಧದಷ್ಟು ಸೈನಿಕರು, ಸೇನಾಧಿಪತಿಗಳು, ಹಿಂದುಗಳೆ ಆಗಿದ್ದು ಗಮನಾರ್ಹ ಸಂಗತಿ ಎಂದರು. ಟಿಪ್ಪು ಒಬ್ಬ ಅಪ್ರತಿಮ ಸಾಹಸಿ ಅವರ ಕುರಿತು ಇಂದಿನ ಅಧ್ಯಯನ ತುರ್ತು ಇದೆ. ವಿದ್ಯಾರ್ಥಿ ಯುವಜನರು ಟಿಪ್ಪುವಿನ ಕುರಿತಾಗಿ ಅಧ್ಯಯನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

           ಅಕ್ಷತಾ ಕೆ.ಸಿ ಮಾತನಾಡಿ ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಎಲ್ಲ ಧರ್ಮಗಳಿಗೂ ಅದರದೆ ಆದ ಮಹತ್ವ ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಸ್ವಂತ ಮಕ್ಕಳನ್ನೆ ಒತ್ತೆ ಇಟ್ಟದ್ದು ಅದು ಏಕೈಕ ದೊರೆ ಟಿಪ್ಪು ಸುಲ್ತಾನ ಮಾತ್ರ. ಬ್ರಿಟಿಷರ ಆಮೀಷಗಳಿಗೆ ತಲೆ ಬಾಗದೆ ಟಿಪ್ಪು ರಣಾಂಗಣದಲ್ಲಿ ಹೋರಾಡಿದರು. ದಲಿತರಿಗೆ, ಶೂದ್ರರಿಗೆ ಭೂಮಿಯನ್ನ ಹಂಚಿಕೆ ಮಾಡಿದ್ದು, ಪಾಳೆಗಾರರ ಪಾಲಾಗಿದ್ದ ಭೂಮಿಯನ್ನ ರೈತರಿಗೆ ಹಂಚಿಕೆ ಮಾಡಿದ ಕೀರ್ತಿ ಟಿಪ್ಪು ಸುಲ್ತಾನದು ಎಂದರು.

           ಸಾಮಾಜಿಕ ಪರಿವರ್ತನಾ ಜನಾಂದೋಲನದ ಮುಖಂಡರಾದ ಹಸೀನಾ ಹೆಡಿಯಾಲ ಮಾತನಾಡಿ ಟಿಪ್ಪುವಿನಂತಹ ವ್ಯಕ್ತಿತ್ವದ ಕುರಿತಾಗಿ ಇಂದಿನ ಯುವಜನರ ಅಧ್ಯಯನ ಆರಂಭವಾಗಬೇಕಿದೆ. ಓಪ್ಪುವನ್ನು ಕೇವಲ ಒಂದು ಧರ್ಮಕ್ಕೆ ಸೀಮಿತಗೊಳಿಸದೆ ಸ್ವಾತಂತ್ರ್ಯ ಹೋರಾಟಗಾರನಾಗಿ ನೋಡಬೇಕಿದೆ ಎಂದರು.

           ಕಾರ್ಯಕ್ರಮದಲ್ಲಿ ಸಾಹಿತಿ, ಕವಿಗಳಾದ ಸತೀಶ ಕುಲಕರ್ಣಿ ಭಾಗವಹಿಸಿ ಮಾತನಾಡಿದರು. ಎಸ್‍ಎಫ್‍ಐ ಮುಖಂಡರಾದ ಮೋಹನ, ತೆರೆದ ತಂಗುದಾಣದ ಸಂಯೋಜಕರಾದ ಪುಟ್ಟಪ್ಪ ಹರವಿ, ಮಾಳವ್ವ ಕಡಕೋಳ, ಬಸನಗೌಡ, ದಾವಲ್, ಸಮೀರ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link