ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಗುತ್ತಲ :

         ರಾಷ್ಟ್ರ ರಕ್ಷಣೆಯಲ್ಲಿ ಯೋಧರ ಪಾತ್ರ ಬಹುಮುಖ್ಯವಾಗಿದೆ ಎಂದು ಪಟ್ಟಣ ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.ಸ್ಥಳೀಯ ಶ್ರೀ ವೀರಾಂಜನೇಯನ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಸಾರುವದು ನಮ್ಮ ದೇಶದ ಸಂಸ್ಕತಿ, ಪಾಕಿಸ್ತಾನ ರಾಷ್ಟ್ರ ಹಾಗೂ ಕೆಲವು ಉಗ್ರಗಾಮಿ ಸಂಘಟನೆಗಳು ಗಡಿ ಭಾಗದಲ್ಲಿ ಸೀಮಾ ಉಲ್ಲಂಘನೆ ಮಾಡುವ ಮೂಲಕ ಯೋಧರೊಂದಿಗೆ ಗುಂಡಿನ ದಾಳಿ ನಿರಂತರವಾಗಿ ನಡೆಯುತ್ತವೆ . ಯುವಕರು ರಾಷ್ಟ್ರದ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಸದಾ ಕಾಲ ಸನ್ನದ್ಧರಾಗಬೇಕು. ರಾಷ್ಟ್ರ ರಕ್ಷಣೆಯಲ್ಲಿ ರಾಜಕೀಯವನ್ನು ಮಾಡದೆ ದೇಶ ಭದ್ರತೆಯನ್ನು ಕಾಯ್ದುಕೊಳ್ಳಬೇಕು ಎಂದರು.

           ಬಿಎಸ್‍ಎಫ್ ಯೋಧ ಅಶೋಕ ಹಾವೇರಿ ಮಾತನಾಡಿ, ಭಾರತಾಂಬೆಯ ಋಣ ತೀರಿಸಲು ಸೈನ್ಯೆಕ್ಕೆ ಸೇರಿದ್ದು ಆದರೆ ಪಾಪಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಗಡಿಯಲ್ಲಿ ಯೋಧರ ವೀರ ಮರಣ ಹೊಂದುತ್ತಿರುವದು ತುಂಬಾ ದುಃಖದ ಸಂಗತಿ. 1947 ರಲಿ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಯೋಧರ ಬಲಿದಾನ ನಿಂತಿಲ್ಲ, ವೈರಿ ರಾಷ್ಟ್ರಗಳನ್ನು ದಮನ ಮಾಡಲು ಭಾರತದ ಪ್ರತಿಯೊಬ್ಬ ಯೋಧನು ದಿನದ 24 ಗಂಟೆ ಸಿದ್ಧವಾಗಿದ್ದಾನೆ ಎಂದರು. ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ 42 ಕ್ಕೂ ಹೆಚ್ಚು ವೀರ ಸೈನಿಕರ ಕುಟುಂಬಗಳು ತೀವ್ರವಾದ ದುಃಖದಲ್ಲಿ ಇದ್ದು ಭಾರತೀಯರಿಗೆ ಇದೊಂದು ಕರಾಳ ದಿನವಾಗಿದೆ. ಉಗ್ರಗಾಮಿಗಳು ದೇಶಕ್ಕೆ ಮಾರಕವಾಗಿದ್ದು ಇಂತಹ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಬೇಕು.

          ಈ ಸಂಧರ್ಭದಲ್ಲಿ: ಗಿರೀಶ ತರ್ಲಿ, ಪ್ರಸನ್ನ ಜಾನ್ಮನಿ, ಶಿವಯೋಗಿ ಕಾಗಿನೆಲ್ಲಿ, ಶಿವಯೋಗಿ ಹೇಮಗಿರಿಮಠ, ಮಲ್ಲಿಕಾರ್ಜುನ ಮರಿಯಾನಿ, ಹಾಲೇಶ ಹಾಲಣ್ಣನವರ, ಸಿದ್ದರಾಜ ಸಾಲಗೇರಿ, ವೀರಯ್ಯ ಪ್ರಸಾಧಿಮಠ, ಕುಮಾರ ಚಿಗರಿ, ಪ್ರಕಾಶ ಹೊನ್ನಮ್ಮನವರ, ಮಹೇಶ ಅರ್ಕಸಾಲಿ ಶೇಖಪ್ಪ ನರಸಣ್ಣನವರ ಹಾಗೂ ಪಟ್ಟಣದ ಯುವಕರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link