ಪಾವಗಡ
2350 ಕೋಟಿ ವೆಚ್ಚದಲ್ಲಿ ತುಂಗಾಭಧ್ರ ಕುಡಿಯುವ ನೀರು ಯೋಜನೆಯಲ್ಲಿ ತಾಲ್ಲೂಕಿನ 360 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ತರುತ್ತೇನೆ ಎಂದು ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.
ಅವರು ಪಾವಗಡ ತಾಲ್ಲೂಕು ಕೊಡಮಡಗು ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿ ತಾಲ್ಲೂಕಿನ ಹಳ್ಳಿಗಳ ಜನಸಂಖ್ಯೆ ಅಧಾರದ ಮೇಲೆ ಓವರ್ ಹೇಡ್ ಟ್ಯಾಂಕ್‍ಗಳು ನಿರ್ಮಾಣ ಮಾಡಿ ಕುಡಿಯುವ ನೀರು ಸರಬರಾಜು ಮಾಡುಲು ಇಂಜಿನೀಯರ್‍ಗಳು ಸಮೀಕ್ಷೆ ನಡೆಯುತ್ತಿದೆ ಎಂದರು.
ಕೆರೆಗಳಿಗೆ ನೀರು ಹರಿಸುವ 7 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಟೆಂಡರ್ ಪಕ್ರಿಯೆ ನಡೆದಿದ್ದು,ಕುಡಿಯುವ ನೀರಿನ ಜೋತೆಗೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಜರೂರಾಗಿ ಕೆಲಸ ಕೈಗೋಳ್ಳಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಯೋಜನೆ ಮತ್ತು ಅರೆಕ್ಯಾತನಹಳ್ಳಿ ಹತ್ತಿರ ನಿರ್ಮಾಣವಾದ 220 ಕೆ.ವಿ.ಎಂ.ಟೇಷನ್ ಉದ್ಟಾಟನೆ ಶೀಘ್ರದಲ್ಲಿ ಮಾಡುವುದಾಗಿ ತಿಳಿಸಿದರು.ಆಂಧ್ರದ ಗಡಿ ಭಾಗದಲ್ಲಿರುವ ನೂತನ ಕೊಡಮಡಗು ಗ್ರಾಮ ಪಂಚಾಯಿತಿ ವಿಶಾಲವಾದ ಜಾಗದಲ್ಲಿ ಸುಂದರವಾದ ಕಟ್ಟಡ ನಿರ್ಮಾಣ ಮಾಡಬೇಕು,ತಾಲ್ಲೂಕಿನಲ್ಲಿ ಯಾವುದೇ ಗ್ರಾ.ಪಂ.ನಲ್ಲಿ ಇಷ್ಟೋಂದು ವಿಶಾಲವಾದ ಜಾಗ ಹೊಂದಿಲ್ಲ,20 ಲಕ್ಷ ಜಿ.ಪಂ.ಅನುದಾನ,16.5 ಲಕ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ,14 ನೇ ಹಣ ಕಾಸು ಯೋಜನೆಯಲ್ಲಿ 5 ಲಕ್ಷ ರೂಗಳು ಬಳಿಕೆ ಮಾಡಿ ಕೊಂಡು ಸುಂದರಾವಾದ ಕಟ್ಟಡ ನಿರ್ಮಾಣ ಮಾಡಬೇಕು,ಇದರ ಜೊತೆಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂಗಳು ನೀಡುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ಜನರಿಗೆ ಸಿಗುವ ಸೌಲಭ್ಯಗಳನ್ನು ಭೇದಬಾವವಿಲ್ಲದೆ ಸರ್ಕಾರದ ಯೋಜನೆಗಳು ಅನುಷ್ಟಾನ ಅಗಬೇಕು ಎಂದರು.ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ ಎಸ್.ಸಿ.ಪಿ,ಟಿ.ಎಸ್.ಪಿ ಯೋಜನೆಯಲ್ಲಿ 8 ಕೋಟಿ ಟೆಂಡರ್ ಅಗಿದ್ದು,ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಅಭಿವೃದ್ಧಿಗೆ 36 ಕೋಟಿ,ಪಾವಗಡ-ಬೊಮ್ಮತನಹಳ್ಳಿ ಹಾಗೂ ಚಿನ್ನಮ್ಮನಹಳ್ಳಿ ರಸ್ತೆ ಅಭಿವೃದ್ಧಿಗೆ 3ಕೋಟಿ ರೂಗಳು ಮುಂಜೂರಾಗಿದ್ದು,5 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಮುಂಜೂರು ಮಾಡಿಸಿದ್ದು,ಕೆರೆಗಳ ಅಭಿವೃದ್ಧಿಗೆ 5 ಕೋಟಿ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆ ಮಾಡಿಸಲಾಗಿದೆ ಎಂದರು.
ಪಾವಗಡ ಅಭಿವೃದ್ಧಿಗಾಗಿ 30 ಕೋಟಿ ಹಣ ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ,20 ಕೋಟಿ ಪಟ್ಟಣದ ಮೂಲ ಭೂತ ಸೌಕರ್ಯಗಳಿಗೆ ವಿಶೇಷ ಅನುದಾನದಲ್ಲಿ ಬಿಡುಗಡೆ ಗೊಳಿಸಲು ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.
ಯಡಿಯೂರಪ್ಪ ಸರ್ಕಾರವನ್ನು ಉರಿಳಿಸಲು ಎಷ್ಟೇ ದುಡ್ಡು ಕೋಟರು,ಎಷ್ಟೆ ಪ್ರಯತ್ನ ಮಾಡಿದರು ಯಡಿಯೂರಪ್ಪ ಪಲ್ಟಿ ಹೊಡೆಯಬೇಕು ಹೊರೆತು. ಸರ್ಕಾರವನ್ನು ಬೀಳಸಲು ಸಾಧ್ಯವಿಲ್ಲ,ನಾವೇಲ್ಲ ಒಗ್ಗಟಾಗಿದ್ದೇವೆ ಎಂದ ಅವರು ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣ,ಉದ್ಯೋಗ ನೀಡುವ ಭರವಸೆ,ಕಪ್ಪು ಹಣ ಖಾತೆಗಳಿಗೆ ವರ್ಗಾವಣೆ, ಟೋಳ್ಳು ಅಶ್ವಾಸನೆಗಳು ನೀಡುವುದೇ ಇವರು ಮಾಡಿದ ಅಭಿವೃದ್ಧಿ ಎಂದು ವ್ಯಂಗವಾಡಿದರು.
ಮಾಜಿ ಶಾಸಕ ಸೋಮ್ಲಾನಾಯ್ಕ,ಶ್ರೀರಾಮನಾಯ್ಕ,ಗ್ರಾ.ಪಂ.ಸದಸ್ಯ ಸುಬ್ಬರಾಯಪ್ಪ,ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ವಿ.ಹೆಚ್.ಈಶ್ವರಯ್ಯರವರು ಮಾತನಾಡಿದರು.
ಈ ಕಾರ್ಯಾಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಂಗಳವಾಡ ಜಿ.ಪಂ.ಸದಸ್ಯ ಹೆಚ್.ವಿ.ವೆಂಕಟೇಶ್,ಗ್ರಾಮ ಪಂಚಾಯಿತಿ ಅಧ್ಯಕ್ಷಣಿಎನ್.ಪದ್ಮಬಾಯಿಕೃಷ್ಣನಾಯ್ಕ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್‍ಬಾಬು,ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಶೇಷಗಿರಿ,ತಾ.ಪಂ.ಸದಸ್ಯ ಐ.ಜಿ.ನಾಗರಾಜು,ಪುರಸಭೆ ಸದಸ್ಯ ರಾಜೇಶ್,ಎ.ಪಿ.ಎಂ.ಸಿ ಅಧ್ಯಕ್ಷ ರವಿಕುಮಾರ್,ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ಬರಾಯಪ್ಪ,ಲಕ್ಷ್ಮನಾರಾಯಣ, ಸುನಂದಮ್ಮಕೃಷ್ಣಪ್ಪ, ಲೋಕೇಶ್‍ನಾಯ್ಕ,ನಾಗಮಣಿನರಸಿಂಹಮೂರ್ತಿ, ರಾಮಾಂಜಿನಮ್ಮ,ವೆಂಕಟಲಕ್ಷ್ಮಸುಬ್ಬಾನಾಯ್ಕ,ನಾಗಮಣಿ,ನಾರಾಯಣಮ್ಮ,ಅಂಜಿನಮ್ಮದುರ್ಗಪ್ಪ ,ಪಿ.ಡಿ.ಒ ಮುದ್ದಣ್ಣ.ಹೆಚ್,ಮಂಜುನಾಥ್, ಹನುಮಂತರಾಯ,ಹಾಜರಿದ್ದರು.