ಬ್ಯಾಡಗಿ:
ತಾಲೂಕಿನಲ್ಲಿ ಮಾ.21 ರಿಂದ ಏ. 4 ರವರೆಗೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಶಾಂತಿ ಸುವ್ಯವಸ್ಥೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಸ್ಥಳದಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ ತಿಳಿಸಿದ್ದಾರೆ.
ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಿರ್ಭಂದಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಹಾಗೂ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಆ ಪ್ರದೇಶಗಳಲ್ಲಿನ ಝರಾಕ್ಷ ಮತ್ತು ಟೈಪಿಂಗ್ ಸೆಂಟ್ರಗಳನ್ನು ಮುಚ್ಚಲು ತಿಳಿಸಲಾಗಿದೆ. ಅದರಂತೆ ಮೋಬೈಲ್ ಬಳಕೆಯನ್ನು ನಿಷೇಧಿಸುವಂತೆ ತಿಳಿಸಲಾಗಿಯಲ್ಲದೇ 7 ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಒಟ್ಟು 2006 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆಂದರು.
ಒಟ್ಟು 7 ಕೇಂದ್ರಗಳು
ತಾಲೂಕಿನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಒಟ್ಟು 7 ಕೇಂದ್ರಗಳನ್ನು ತೆರೆಯಲಾಗಿದೆ. ಸ್ಥಳೀಯ ಎಸ್ಜೆಜೆಎಂ ಸರಕಾರಿ ಸಂಯುಕ್ತ ಪ್ರೌಢ ಶಾಲೆ, ನೂತನ ಪ್ರೌಢ ಶಾಲೆ, ತಾಲೂಕಿನ ಛತ್ರ ಗ್ರಾಮದ ಸರಕಾರಿ ಪ್ರೌಢ ಶಾಲೆ, ಕಾಗಿನೆಲೆ ಕೆ.ಜಿ.ವಿ.ಪ್ರೌಢ ಶಾಲೆ, ಬಿಸಲಹಳ್ಳಿಯ ಸರಕಾರಿ ಪ್ರೌಢ ಶಾಲೆ, ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ ಪ್ರೌಢ ಶಾಲೆ, ಚಿಕ್ಕಬಾಸೂರಿನ ಎಸ್.ಕೆ.ವಿ.ಪ್ರೌಢ ಶಾಲೆಗಳೆಂದರು. ಈ ಸಂದರ್ಭದಲ್ಲಿ ಎಂ.ಎಫ್.ಬಾರ್ಕಿ, ಜಿವರಾಜ್ ಛತ್ರದ, ಬಸವರಾಜ ಸೋಮಕ್ಕಳವರ ಉಪಸ್ಥಿತರಿದ್ದರು.