ಹೊಸಪೇಟೆ:
ದಿವ್ಯಾಂಗರು, ವಿಕಲಚೇತನರು, ಅಂಗವೈಫಲ್ಯದಿಂದ ಒಂದು ಭಿಕ್ಷೆ ಬೇಡಿ ಜೀವನ ಸಾಗಿಸಬೇಕು, ಇಲ್ಲವೇ ಪರಾವಲಂಬಿಗಳಾಗಿ ಬಾಳಬೇಕು. ಆರ್ಥಿಕವಾಗಿ ಸದೃಢರಾಗಲು ಈ ಕೃತಕ ಕಾಲು ಜೋಡಣಾ ಶಿಬಿರ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಎಂಎಸ್ ಪಿಎಲ್ ಅಧ್ಯಕ್ಷ ನರೇಂದ್ರ ಕುಮಾರ್ ಬಲ್ಡೋಟ ತಿಳಿಸಿದರು.
ಅವರು ಭಗವಾನ್ ಮಹಾವೀರ ಅಂಗವಿಕಲರ ಸಹಕಾರ ಸಮಿತಿ ಜೈಪುರ ಹಾಗೂ ಎಂ ಎಸ್ ಪಿ ಎಲ್ ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕೃತಕ ಕಾಲು ಶಿಬಿರ ಉದ್ಘಾಟಿಸಿ ಮಾತನಾಡಿ ಈ ತರಹ ಕಾರ್ಯಕ್ರಮಗಳು ಕಳೆದ 8 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಕೃತಕ ಕಾಲು ಹಾಕಿಸಿಕೊಳ್ಳುವುದು ವೆಚ್ಚದಾಯಕವಾಗಿದ್ದು ಬಡವರಿಗೆ ನಿರ್ಗತಿಕರಿಗೆ ಶ್ರೀಮಂತರಿಗೂ ಕೂಡ ಮನೆ ಬಾಗಿಲಿನ ಈ ಸೇವೆ ಅತ್ಯಂತ ಸಹಕಾರಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ವಿಕಲಾಂಗರು ಸ್ವಾಭಿಮಾನಿಯಾಗಿ ಬದುಕಬೇಕು ಆರ್ಥಿಕವಾಗಿ ಸಾಮಾಜಿಕವಾಗಿ ಎಲ್ಲರಂತೆ ಸಹಜ ಚೀನ ನಡೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪಕ್ಕದ ಜಿಲ್ಲೆಗಳಿಂದ ಬಂದು ನಾವು ಆಯೋಜಿಸಿರುವ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆ ತರುವ ವಿಷಯ ಎಂದು ತಿಳಿಸಿದರು,
ಜಯಪುರ ಭಗವಾನ್ ಮಹಾವೀರ ಅಂಗವಿಕಲರ ಸಮಿತಿ ಅನಿಲ್ ಸುರಾನ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಕಾಲಕಾಲಕ್ಕೆ ರಕ್ತ ಪರೀಕ್ಷೆ ಸೇರಿದಂತೆ ಸಣ್ಣಪುಟ್ಟ ಗಾಯಗಳ ಔಷಧ ಉಪಚಾರ ನಿರ್ಲಕ್ಷ್ಯದಿಂದ ಕಾರಣ ಗ್ಯಾಂಗ್ರಿನ್ ಸಹಜವಾಗುತ್ತಿದೆ, ಇದರಿಂದ ಕೃತಕ ಕಾಲು ಜೋಡಣೆಗೆ ಹೆಚ್ಚಿನ ಬೇಡಿಕೆ ಯಾಗುತ್ತಿದ್ದು ಹೀಗಾಗದಂತೆ ಎಚ್ಚರ ವಹಿಸಿಕೊಳ್ಳಲು ಸಲಹೆ ನೀಡಿದರು.
ಡಾ ವಿಶ್ವನಾಥ್ ದೀಪಾಲಿ ಮಾತನಾಡಿದರು, ವೇದಿಕೆ ಮೇಲೆ ಶ್ರೀಮತಿ ಲವೀನಾ ಆರ್ ಬಲ್ಡೋಟ ಇದ್ದರು, ಕಾರ್ಯಕ್ರಮದಲ್ಲಿ ಎಂಎಸ್‍ಪಿಎಲ್ ಸಂಸ್ಥೆಯ ಸಮಾಜ ಸೇವಾ ವಿಭಾಗದ ರಮೇಶ್, ಕಾರ್ಯಕಾರಿ ನಿರ್ದೇಶಕ ಕೆ ಪ್ರಭು, ಉಪಾಧ್ಯಕ್ಷ ಪ್ರವೀಣ್ ಸಿಂಗ್, ಮೈನಿಂಗ್ ವಿಭಾಗದ ಮೇದಾ ವೆಂಕಟಯ್ಯ ಉಪಸ್ಥಿತರಿದ್ದರು.