ಹೊಸಪೇಟೆ :
ವೈಚಾರಿಕ ಮೌಢ್ಯತೆಗಳು ತಾಂಡವವಾಡುದೊಂದಿಗೆ ಸಹಜ ವಿಚಾರಗಳಿಗೆ ಒತ್ತು ಕೊಡದೆ ಇಂದಿನ ನ್ಯಾಯಾಂಗ ವ್ಯವಸ್ಥೆ ಶಿಸ್ತುಬದ್ಧ ಚೌಕಟ್ಟು ನಡೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು
ಮಂಗಳವಾರ ನಗರದ ವಕೀಲರ ಸಂಘದ ಕಟ್ಟಡದಲ್ಲಿ ವಕೀಲರಿಗಾಗಿ ವಕೀಲರನ್ನು ಕುರಿತು ಉಪನ್ಯಾಸ ನೀಡಿದ ಅವರು ವೃತ್ತಿಯ ಪ್ರಾಮಾಣಿಕತೆಯನ್ನು ಕಿರಿಯ ವಕೀಲರುಗಳು ತಮ್ಮಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವೃತ್ತಿಯಲ್ಲಿ ಶ್ರೇಷ್ಠತೆ ಮತ್ತು ಜೇಷ್ಠತೆಯನ್ನು ಹೊಂದಿ ವೃತ್ತಿಯಲ್ಲಿ ಅತ್ಯುತ್ತಮ ಹೆಸರುಗಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಕಿರಿಯ ವಕೀಲರಿಗೆ ಸಲಹೆ ನೀಡಿದರು.
ವಕೀಲರು ನ್ಯಾಯಮೂರ್ತಿಗಳು ನ್ಯಾಯದಾನದ ನಿರ್ವಹಣೆಯಲ್ಲಿ ಹೇಗೆ ಜವಾಬ್ದಾರಿ ವಹಿಸಬೇಕೆಂದು ಎಳೆ ಎಳೆಯಾಗಿ ವಿವರಿಸಿದರು. ಕಿರಿಯ ವಕೀಲರಿಗೆ ಮಿತ್ರರಿಗೆ ವೃತ್ತಿಯಲ್ಲಿ ಇರಬೇಕಾದ ಪದ್ಧತಿ ಮತ್ತು ಪ್ರಾಮಾಣಿಕತೆ ಬಗ್ಗೆ ತಿಳಿಸಿದ ಅವರು ತಮ್ಮ ಸೇವಾ ಅವಧಿಯ ಹಲವಾರು ಘಟನೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಮೇಶ್‍ರವರು ಎಚ್ . ಎನ್. ನಾಗಮೋಹನ್ ದಾಸ್ ಅವರನ್ನು ಮೈಸೂರು ಪೇಟಾ ತೊಡಿಸಿ ಫಲಪುಷ್ಪ ಸಮರ್ಪಿಸಿದರು.
ನಂತರ ಮಾತನಾಡಿದ ಅವರು ಇಂತಹ ಹಿರಿಯ ಅನುಭವಿ ನ್ಯಾಯಮೂರ್ತಿಗಳು ನಮ್ಮೆಲ್ಲರ ಒಪ್ಪಿಗೆ ಓಗೊಟ್ಟು ಬಂದು ನಮಗೆ ಮಾರ್ಗದರ್ಶನ ನೀಡಿದ್ದನ್ನು ನಾವು ಎಂದೂ ಮರೆಯುವುದಿಲ್ಲ ವೆಂದು ತಿಳಿಸಿದ ಅವರು ವೃತ್ತಿ ಜೀವನದಲ್ಲಿ ಇವರ ಸಲಹೆ ಸೂಚನೆಗಳು ದಾರಿದೀಪವಾಗಲಿದೆ ಎಂದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ವೀರನಗೌಡ ಖಜಾಂಚಿ ಚೆನ್ನಪ್ಪ ಹಿರಿಯ ವಕೀಲರಾದ ಎನ್. ಎಂ ಸುರೇಶ್ ಕುಮಾರ್ ,ಟಿ.ಮಲ್ಲಿಕಾರ್ಜುನ ಸ್ವಾಮಿ, ಎಚ್. ರಮೇಶ್, ನೀಲಕಂಠಯ್ಯ ,ಅನಿಲ್ ಕುಮಾರ್, ಮುಂತಾದವರು ಭಾಗವಹಿಸಿದ್ದರು