ಶಿವಮೊಗ್ಗ:
ಆಟೋರಿಕ್ಷಾದಲ್ಲಿ ಜಿಂಕೆ ಮಾಂಶ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗದ ಶ್ರೀರಾಂಪುರದ ಮಂಜುನಾಥ್ ಅಲಿಯಾಸ್ ಜಿಂಕೆ ಮಂಜ(30) ಹಾಗೂ ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ(32) ಎಂದು ಗುರುತಿಸಲಾಘಿದೆ.
ಆರೋಪಿಗಳಿದ್ದ ಆಟೋ ಹಾಗೂ ಎಂಟು ನೂರು ರು. ನಗದು ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೋಲೀಸ್ ಠಾಣೆ ಪಿಎಸ್ ಐ ತಿರುಮಲೇಶ್, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ವಾಜೀದ್ ನೇತೃತ್ವದ ಪೋಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
