ಕ್ಯಾನ್ಸರ್ ರೋಗ ಗುಣಪಡಿಸಬಹುದು: ಡಾ.ನವೀನ್

0
22

ತುರುವೆಕೆರೆ

      ಕ್ಯಾನ್ಸರ್ ರೋಗವನ್ನು ಪ್ರಾರಂಭದಲ್ಲೆ ಗುರ್ತಿಸಿ ಚಿಕಿತ್ಸೆ ಪಡೆದುಕೊಂಡಲ್ಲಿ ಪೂರ್ಣಪ್ರಮಾಣದಲ್ಲಿ ಗುಣಪಡಿಸಬಹುದು ಎಂದು ಡಾ|| ನವೀನ್ ತಿಳಿಸಿದರು.

         ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ 12.7 ಮಿಲಿಯನ್ ಕ್ಯಾನ್ಸರ್ ರೋಗಿಗಳನ್ನು ಪ್ರತಿ ವರ್ಷ ಪತ್ತೆ ಹಚ್ಚಿದ್ದು ಅದರಲ್ಲಿ ಸುಮಾರು 7 ಮಿಲಿಯನ್ ರೋಗಿಗಳು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. 139 ದೇಶಗಳಲ್ಲಿ 54 ಭಾಷೆಗಳಲ್ಲಿ 14 ಸಾವಿರ ಪತ್ರಿಕೆಗಳು, 145 ಆಕಾಶವಾಣಿಗಳು ಹಾಗೂ ಪ್ರಪಂಚದ 30 ಬೃಹತ್ ನಗರಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ.

         ವಾಸಿಯಾಗದ ಯಾವುದೇ ಗಾಯ, ಊತ, ಗೆಡ್ಡೆಗಳು ಈ ರೋಗದ ಚಿನ್ಹೆಗಳಾಗಿದ್ದು “ನಾವು ಮಾಡಬಲ್ಲೆವು, ನಾನು ಮಾಡಬಲ್ಲೆ” ಎಂಬುದು ಘೋಷವಾಕ್ಯವಾಗಿದೆ. ಬಣ್ಣ ಹಾಕಿದ ಗೋಬಿ, ಅತಿಯಾದ ಮೇಕಪ್, ಪವರ್ ಲೈನ್ ಕೆಳಗಡೆ ವಾಸಿಸುವವರು, ಅತಿಯಾದ ಮೊಬೈಲ್ ಬಳಕೆ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸುವವರಿಗೆ ಕ್ಯಾನ್ಸರ್ ಹೆಚ್ಚಾಗಿ ಕಾಣಬರುವುದು. ಸಾರ್ವಜನಿಕರು ಇದರ ಬಗ್ಗೆ ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದರು.

          ಕಾರ್ಯಕ್ರಮದಲ್ಲಿ ಡಾ. ಸುಪ್ರಿಯಾ ಅಧ್ಯಕ್ಷತೆ ವಹಿಸಿದ್ದು ಡಾ. ಮುರುಳಿ, ಡಾ.ಪುರುಶೋತ್ತಮ್, ಡಾ. ಷೇಕ್‍ಮೌಷ್, ಡಾ. ಮಧುಮಿತ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ , ಹೊನ್ನಮ್ಮ, ಎನ್.ಸಿ.ಡಿ. ಯ ಕರಿಯಪ್ಪ, ವಾಲಪ್ಪ, ಸಿಂಧೂಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here