ಚೆಕ್ ಡ್ಯಾಮ್ ನಿರ್ಮಾಣ ಮಾಡಿರುವ ಸರ್ವೇ ನಂಬರ್ ಬದಲಾಗಿದೆ:ಅಧಿಕಾರಿಗಳು
ಹುಳಿಯಾರು:
ನರೇಗಾ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣ ಮಾಡದೇ ಹಣ ಗುಳುಂ ಮಾಡಿದ್ದು ದಾಖಲೆಯಲ್ಲಿ ತೋರಿಸಿರುವ ಚೆಕ್ ಡ್ಯಾಮ್ ಎಲ್ಲಿದೆ ಎಂದು ಪತ್ತೆ ಮಾಡಿಕೊಡಿ ಎಂದು ಆರ್‍ಟಿಇ ಕಾರ್ಯಕರ್ತರೊಬ್ಬರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಒಂಬುಡ್ಸ್‍ಮನ್ ಅಧಿಕಾರಿ ಅಲ್ಲಪ್ಪ ಗುರುವಾರ ಹುಳಿಯಾರಿಗೆ ಆಗಮಿಸಿ ಸ್ಥಳ ತನಿಖೆ ನಡೆಸಿದರು.
ಹುಳಿಯಾರಿನ ಎಪಿಎಂಸಿ ಹಿಂಭಾಗದ ಜನವಸತಿ ಪ್ರದೇಶವಾದ ಬಸವೇಶ್ವರ ನಗರದಲ್ಲಿನ ಸರ್ವೆ ನಂಬರ್ 62 ಹಾಗೂ 70 ರಲ್ಲಿ ಉದ್ಯೋಗ ಖಾತ್ರಿ (ನರೇಗ) ಯೋಜನೆಯಡಿ ಚೆಕ್ ಡ್ಯಾಮ್ ಮಾಡಲಾಗಿದೆ ಎಂದು ಹೇಳಿಕೊಂಡು ನಡೆಯದ ಕಾಮಗಾರಿಗೆ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದು ಈದೀಗ ಚೆಕ್ ಡ್ಯಾಂ ಎಲ್ಲಿದೆ ಪತ್ತೆ ಮಾಡಿಕೊಡಿ ಎಂದು ಹುಳಿಯಾರಿನ ಆರ್ಟಿಐ ಕಾರ್ಯಕರ್ತ ಶಂಕರೇಶ್ ರವರು ಜಿ.ಪಂ.ಒಂಬುಡ್ಸ್ಮನ್ ಗೆ ದೂರು ದಾಖಲಿಸಿದ್ದರ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡವೇ ಇಂದು ಹುಳಿಯಾರಿಗೆ ಆಗಮಿಸಿತ್ತು.
ನಿಗದಿತ ಸಮಯಕ್ಕೆ ಒಂಬಡ್ಸ್ಮನ್ ಅಧಿಕಾರಿಗಳು ಆಗಮಿಸಿದರಾದರೂ ದೂರುದಾರರು ತಿಳಿಸಿದ್ದ ಜಾಗಕ್ಕೆ ಆಗಮಿಸಿದೆ ಕಾಮಗಾರಿ ಅನುಷ್ಠಾನ ಅಧಿಕಾರಿಗಳು ಅವರನ್ನು ಬೇರೆಡೆಗೆ ಕರೆದುಕೊಂಡುಹೋದ್ದರಿಂದ ಗೊಂದಲಕ್ಕೆ ಕಾರಣವಾಯಿತು.ದೂರಿನಲ್ಲಿ ಹುಳಿಯಾರು ಸರ್ವೆ ನಂಬರ್ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಸಹ ಅಧಿಕಾರಿಗಳು ಅವರನ್ನು ಇದೇ ಸರ್ವೇ ನಂಬರಿನ ಬೇರೆ ಸ್ಥಳಕ್ಕೆ ಕರೆದೊಯ್ದು ತಪಾಸಣೆ ಮಾಡಿಸಿದರು.ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ ದೂರುದಾರ ಶಂಕರೇಶ್ ದಾಖಲೆ ಪ್ರಕಾರ ಸರ್ವೆ ನಂಬರ್ 62 ಹುಳಿಯಾರಿಗೆ ಸೇರಿದ್ದು ಈ ಸ್ಥಳದಲ್ಲಿ ಯಾವುದೇ ಕಾಮಗಾರಿ ಮಾಡಿರುವುದಿಲ್ಲ ತಾವು ಸ್ಥಳ ತನಿಖೆ ಮಾಡುವಂತೆ ಪಟ್ಟುಹಿಡಿದರು.
ಅಲ್ಲದೆ ಸ್ಥಳದಲ್ಲಿದ್ದ ನಿವಾಸಿಗಳು ಸಹ ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷವಾಗಿದ್ದು ಪಂಚಾಯಿತಿಯಲ್ಲಿ ತೋರಿಸಿರುವ ದಾಖಲೆ ಪ್ರಕಾರ ಸದರಿ ಸರ್ವೇ ನಂಬರ್ ಗಳಲ್ಲಿ ಯಾವುದೇ ಚೆಕ್ ಡ್ಯಾಂ ನಿರ್ಮಾಣ ಮಾಡದೆ ಕೇವಲ ಹಣ ಮಾತ್ರ ಡ್ರಾ ಮಾಡಲಾಗಿದೆ.ಸದರಿ ಚಕ್ಕಡ್ಯಾಂಗೆ ಕಳೆದ ವರ್ಷವೂ ಸಹ ಹಣ ಬಿಡುಗಡೆ ಮಾಡಲಾಗಿದೆ.ಅಧಿಕಾರಿಗಳು ಒಂಬುಡ್ಸ್ಮನ್ ಅವರನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು
ಇದರಿಂದ ಗೊಂದಲಕ್ಕೊಳಗಾದ ಒಂಬಡ್ಸಮನ್ ಅವರಿಗೆ ಅಧಿಕಾರಿಗಳು ಸರ್ವೇ ನಂಬರ್ ದಾಖಲಿಸುವುದರಲ್ಲಿ ಎಡವಟ್ಟಾಗಿದ್ದು ಈ ಸರ್ವೇ ನಂಬರ್ ನಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿರುವುದಿಲ್ಲ. ನಾವು ಚೆಕ್ ಡ್ಯಾಂ ನಿರ್ಮಾಣ ಮಾಡಿರುವ ಸ್ಥಳ ಬೇರೆಯದಾಗಿದ್ದು ಒಟ್ಟಾರೆ ಎರಡು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿರುವುದಾಗಿ ಉತ್ತರಿಸಿದರು.
ಈ ಸಂದರ್ಭದಲ್ಲಿ ದೂರುದಾರ ಶಂಕರೇಶ್, ಹಿಂದಿನ ನರೇಗಾ ಅನುಷ್ಠಾನಾಧಿಕಾರಿ ಕೆ.ಶಿವಾನಂದಪ್ಪ, ಹರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹನುಮರಾಜು ಹಾಗೂ ಅಡವೀಶ್ ಕುಮಾರ್ ಮತ್ತು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಹರೀಶ್, ಲಂಚಮುಕ್ತ ನಿರ್ಮಾಣ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ಇಮ್ರಾಜ್, ಪ್ರಸನ್ನಕುಮಾರ್, ಉಮೇಶ್, ಇಂಜಿನಿಯರ್ ಲಿಂಗರಾಜು, ಈಶ್ವರಪ್ಪ, ಹೊಯ್ಸಳಕಟ್ಟೆ ಯುವರಾಜ್, ಸ್ಟುಡಿಯೋ ರಾಜು, ಚಿಕ್ಕಬಿದರೆ ಸ್ವಾಮಿ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.