ದಸರಾ ಹಬ್ಬವೆಂದರೆ ಶತ್ರುಗಳನ್ನೂ ಒಗ್ಗೂಡಿಸುವ ಮಹತ್ವದ ಹಬ್ಬ.

          ಕಾಮ, ಕ್ರೋಧ, ಮದ, ಮತ್ಸರವನ್ನು ತ್ಯಜಿಸಿದವನೇ ನಿಜವಾದ ಮಾನವನಾಗಬಲ್ಲ” ಎಂದು ಶ್ರೀಶೈಲ ಮಹಾ ಸ್ವಾಮಿ ಶ್ರೀ ವೀರಭದ್ರ ಮಹಾ ಸ್ವಾಮೀಜಿಗಳು ಹಿತವಚನ ನೀಡಿದರು. ಅವರು ಸಮೀಪದ ಸಿಧ್ಧರಾಂಪುರ ಮಠದಲ್ಲಿ 17ನೇ ವರ್ಷದ ಶರನ್ನವರಾತ್ರಿ ನಿಮಿತ್ತ ಏರ್ಪಡಿಸಿದ್ದ ಹೋಮ ಹವನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತನ್ನ ಮಾನವೀಯತೆಯ ಗುಣವನ್ನು ಮರೆಯದೆ ಒಳ್ಳೆಯತನವನ್ನು ಬೆಳೆಸಿಕೊಳ್ಳಬೇಕು.

         ಅಂದಾಗಲೇ ಸಮಾಜ ಪರಿಶುಧ್ಧಗೊಳ್ಳಲು ಸಾಧ್ಯವೆಂದರು. ತದ ನಂತರ ಶ್ರೀ ಕದಳೀವನ ಸಿಧ್ಧರಾಂಪುರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು “ದಸರಾ ಹಬ್ಬವೆಂದರೆ ಶತ್ರುಗಳನ್ನೂ ಒಗ್ಗೂಡಿಸುವ ಮಹತ್ವದ ಹಬ್ಬ. ಇದನ್ನು ಕುಮಾರ ವ್ಯಾಸರ ಮಹಾ ಭಾರತದಲ್ಲೇ ಸೃಷ್ಠಿಸಿದ ಇತಿಹಾಸವಿದೆ ಎಂದರು. ಆ ನಂತರ ಕೊಕ್ಕರಚೇಡು ಮಠದ ಶಿವಶರಣಮ್ಮ ಮಹಾತಾಯಿ “ಪುರಾಣ ಪುಣ್ಯ ಕಥೆಗಳು ಹಿರಿಯರು ಗುರೂಜಿಗಳು ಕಟ್ಟಿಕೊಟ್ಟ ಬುತ್ತಿ. ಅದನ್ನು ಕಾಪಾಡುವುದೇ ಮನುಜ ಕುಲದ ಧರ್ಮ ಎಂದರು.

         ತದ ನಂತರ ಮಾತನಾಡಿದ ನವಲ್‍ಕಲ್ ಮಠದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ ಹಾಗೂ ರೌಡಕುಂದ ಮಠದ ಪರಮ ಪೂಜ್ಯ ಸಿಧ್ಧರಾಮಯ್ಯ ತಾತನವರು “ಸಿದ್ದೇಶ್ವರ ತಾತನವರು ಕದಳೀವನದ ಕಾಡಿನಲ್ಲಿ ಸತತವಾಗಿ 25ವರ್ಷಗಳಿಂದ ನಿರತ ತಪಸ್ವಿಯಾಗಿ ಸಾವಿರಾರು ಭಕ್ತರ ಮನವನ್ನು ಓಲೈಸಿ ಜನ ಮನ್ನಣೆಗೆ ಕೀರ್ತಿ ಪಡೆದಿದ್ದಾರೆ. ಪುರಾಣ ಪುಣ್ಯ ಕಥೆಗಳಲ್ಲಿ ಸಾರಿರುವಂತೆ ಕೈಲಾಸ ಪರ್ವತದ ಇತಿಹಾಸದಂತೆ ಮಳೆ ಬೆಳೆಗಾಗಿ ಪ್ರಾರ್ಥಿಸಿ ನಿತ್ಯ ಅನ್ನ ದಾಸೋಹ, ಪುರಾಣ ಪುಣ್ಯ ಕಥೆ ಏರ್ಪಡಿಸುತ್ತಿರುವುದು ಇಂತಹಾ ಸಣ್ಣ ಹಳ್ಳಿಯ ಪರಮಾದೃಷ್ಟ ಎಂದರು.

          ಪ್ರಾರಂಭದಲ್ಲಿ ಆಂಜನೇಯ ದೇವಸ್ಥಾನದಿಂದ ಗಂಗೆ ಪೂಜೆ ಮಾಡಿ ಡೊಳ್ಳುವಾದ್ಯ ಮೇಳ, ನಂದಿ ಧ್ವಜ, ವೀರಗಾಸೆ ಕುಣಿತ ನಡೆಸಿ ನೂರಾರು ಮಹಿಳೆಯರು ಕಳಸ ಹೊತ್ತು ಸಿಧ್ಧೇಶ್ವರ ಮಹಾದ್ವಾರಕ್ಕೆ ತಲುಪಿ ಶ್ರೀ ದೇವಿ ಮೂರ್ತಿಯ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.

          ಸಿರಿಗೇರಿಯ ಎಸ್.ಎಂ.ನಾಗರಾಜಸ್ವಾಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾದ ಪೂಜ್ಯ ಶ್ರೀ ಶಿವಕುಮಾರ ದೇವರು, ಪುರಾಣ ವಾಚಕರಾದ ಎಸ್.ಆರ್.ಮಹಬಲೇಶ್ವರ ಗೌಡ, ತಬಲಾ ವಾದಕ ಕೆ.ಭೀಮೇಶ, ಕ್ಯಾಶಿಯೋ ಟಿ.ಹೆಚ್.ಶೇಕ್ಷಾವಲಿ, ಮಾಜಿ ಶಾಸಕ ಚಂದ್ರಯ್ಯಸ್ವಾಮಿ ,ವೆಂಕಟರಮಣ ರೆಡಿ ಗೋನಾಳ ವಿರುಪಾಕ್ಷಿಗೌಡ ,ಪಂಪಾಪತಿ ಓತೂರ್, ತೇಜಮೂರ್ತಿ, ನಾಗರುದ್ರಗೌಡ, ಬಸವನಗೌಡ, ಹನುಮಂತಗೌಡ, ಕಟ್ಟೆಗೌಡ ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಭಾಗವಹಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link