ಹಗರಿಬೊಮ್ಮನಹಳ್ಳಿ:
ರಾಜ್ಯದ ವಕೀಲರ ಸಂಘದ ಕ್ಷೇಮಾಭಿವೃದ್ಧಿಗೆ ರಾಜ್ಯ ಬಜೆಟ್‍ನಲ್ಲಿ ಯಾವುದೇ ಅನುದಾನ ನೀಡದೆ, ಸಂಪೂರ್ಣ ನಿರ್ಲಕ್ಷ್ಯವಹಿಸಿದ ಕಾರಣ ನೀಡಿ ವಕೀಲರ ತಾಲೂಕು ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ಮಾಡಿ ತಹಸೀಲ್ದಾರ್‍ಗೆ ಮನವಿ ಸಲ್ಲಸಿದಿರು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ತಾಲೂಕು ಕಾಯದರ್ಶಿ ಟಿ.ಜಿ.ಎಂ.ಕೊಟ್ರೇಶ್ ಮಾತನಾಡಿ, ವಕೀಲರ ರಕ್ಷಣಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ರಾಜ್ಯ ಸರ್ಕಾರ ವಕೀಲರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಜರಿದರು. ನಾವು ರಾಜ್ಯ ಸರ್ಕಾರದ ವಿರುದ್ಧ ಕರೆ ನೀಡಿರುವ ರಾಜ್ಯ ವಕೀಲರ ಪರಿಷತ್‍ನ ನಿರ್ಣಯವನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಯಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ನಂತರ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗನಗೌಡ ಮಾತನಾಡಿ, ಭಾರತೀಯ ವಕೀಲರ ಪರಿಷತ್‍ನ ನಿರ್ಣಯವನ್ನು ಬೆಂಬಲಿಸುತ್ತಿರುವ ನಾವು ಇಂದಿನ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಎಂದ ಅವರು, ವಕೀಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿರುವುದು ರಾಜ್ಯ ಸರ್ಕಾರದ ಕರ್ತವ್ಯ. ವಕೀಲರು ಸಹ ಭಾರತದ ಪ್ರಜೆಯಾಗಿದ್ದು, ಎಲ್ಲಾ ರೀತಿಯ ವರ್ಗದವರಿಗೂ ನೀಡಿರುವ ಸೌಲಭ್ಯಗಳನ್ನು ನಮಗೂ ಕಲ್ಪಿಸಿಕೊಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಾಣಾಶಿವಾನಂದ, ಖಜಾಂಚಿ ಶಿವಪ್ರಕಾಶ, ಛತ್ರಪ್ಪ, ಸತ್ಯನಾರಾಯಣ, ಬಾವಿ ಪ್ರಕಾಶ್, ಎಚ್.ಎಂ.ಕೊಟ್ರಯ್ಯ, ಕೆ.ಜಗದೀಶ, ಕಾಗಿ ಪ್ರಹ್ಲಾದ್, ನೆಲ್ಕುದ್ರಿ ಜಗದೀಶ, ಹುಲುಗಪ್ಪ, ವಾಸಂತಿ ಸಾಲ್ಮನಿ, ಕೆ.ಸುಜಾತ, ಯಾಸ್ಮೀನ್, ಎನ್.ಗುರುಬಸವರಾಜ್ ಮತ್ತಿತರರು ಇದ್ದರು.