ಹಗರಿಬೊಮ್ಮನಹಳ್ಳಿ:
ಪಕ್ಷ ನಮ್ಮ ಮೇಲೆ ನಂಬಿಕೆ ಇಟ್ಟು ಟಿಕೇಟ್ ನೀಡಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸಿ ಈ ಬಾರಿ ಹೊಸ ಅಧ್ಯಾಯವನ್ನು ಬರೆಯಲಿರುವೆ ಎಂದು ಲೋಕಸಭೆ ಚುನಾವಣೆ ಬಿ.ಜೆ.ಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅಭಿಪ್ರಾಯ ಹಂಚಿಕೊಂಡರು.
ತಾಲೂಕಿನ ಮಾಲವಿ, ಕೋಗಳಿ, ಕನ್ನಿಹಳಿ, ಇನ್ನಿತರ ಗ್ರಾಮಗಳಿಗೆ ಪ್ರಚಾರದ ನಿಮಿತ್ತ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಲವಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಮುಂದಿನ ದಿನದಲ್ಲಿ ಮೋದಿಯ ಶಿಷ್ಯನಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಿಮ್ಮೆಲ್ಲರ ಪರವಾಗಿ ಸಂಸತ್ತಿನಲ್ಲಿ ಮಾತನಾಡುವೆ ಎಂದರು.
ಇದೇ ವೇಳೆ ಮಾಜಿ ಶಾಸಕ ನೇಮಿರಾಜ ನಾಯ್ಕ್ ಪಾಲ್ಗೊಂಡು, ದೇಶಕ್ಕೆ ಮೋದಿ ಅಗತ್ಯ ಇದೆ, ದೇಶ ಸಂಪೂರ್ಣ ಅಭಿವೃದ್ಧಿಯ ಶಿಖರವನ್ನು ಹೊಂದಬೇಕಾದರೆ, ದೇಶದ ಜನತೆ ಸುರಕ್ಷತೆಯಿಂದ ಕೂಡಿರಬೇಕಾದರೆ, ಅವರು ದೇಶದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿಆಗ ಬೇಕಾಗಿದೆ ಎಂದ ಅವರು, ದೇವೇಂದ್ರಪ್ಪನವರಿಗೆ ಮತ ನೀಡಿದರೆ ಮೋದಿಗೆ ಮತ ನೀಡಿದಂತೆ ಎಂದರು.
ತಾಲೂಕ ಅಧ್ಯಕ್ಷ ನರೆಗಲ್ಲು ಕೊಟ್ರೇಶ, ಮಾಜಿ ಜಿಲ್ಲಾದ್ಯಕ್ಷ ಗುರುಲಿಂಗನಗೌಡ್ರು, ಮುಖಂಡರಾದ ಸೂರ್ಯಬಾಬು, ರೋಹಿತ್, ಜಾತಯ್ಯ, ಯಮನೂರು, ಪೂಜಾರ ಸಿದ್ದಪ್ಪ, ಮಹೇಂದ್ರ, ಸಂಜೀವ್ ರಡ್ಡಿ, ಗಿರಿರಾಜ ರಡ್ಡಿ, ಕೋಗಳಿ ಹನುಮಂತಪ್ಪ ಮತ್ತಿತರರು ಇದ್ದರು.