ಬೆಂಗಳೂರು
ನಗರದಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‍ಕಾಮ್ಸ್) ಆಯೋಜಿಸಿರುವ ದ್ರಾಕ್ಷಿ ಮೇಳದಲ್ಲಿ ತರಹೇವಾರಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸಲಿವೆ.
ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣಿನ ಬೆಳೆಗಾರರನ್ನು ಪೆÇ್ರೀತ್ಸಾಹಿಸುವ ಹಾಗೂ ಗ್ರಾಹಕರಿಗೆ ಶೇಕಡ 10ರಷ್ಟು ರಿಯಾಯಿತಿ ದರದಲ್ಲಿ ಅವುಗಳನ್ನು ಒದಗಿಸುವ ಉದ್ದೇಶದಿಂದ ತನ್ನ ಮಳಿಗೆಗಳಲ್ಲಿ ಸೋಮವಾರದಿಂದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಮಾರಾಟ ಮೇಳವನ್ನು ಹಾಪ್‍ಕಾಮ್ಸ್ ಹಮ್ಮಿಕೊಂಡಿದ್ದು, ಮಾರ್ಚ್ ಅಂತ್ಯದವರೆಗೂ ನಡೆಯಲಿದೆ.
ನಗರದ ಹಡ್ಸನ್ ವೃತ್ತದ ಬಳಿಯ ಹಾಪ್‍ಕಾಮ್ಸ್ ಶೀಥಲ ಗೃಹದ ಆವರಣದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಮೇಳ ಉದ್ಘಾಟಿಸಿ ಮಾತನಾಡಿ ರೈತರು ಮತ್ತು ಗ್ರಾಹಕರ ಹಿತ ಮುಖ್ಯವಾಗಿಟ್ಟುಕೊಂಡು ಜಿಲ್ಲೆ, ಪ್ರತಿ ತಾಲ್ಲೂಕು ವ್ಯಾಪ್ತಿಗಳಲ್ಲಿ ಇನ್ನಷ್ಟುಹಾಪ್ ಕಾಮ್ಸ್ ಮಳಿಗೆ ತೆರೆಯಲು ಕ್ರಮವಹಿಸಲಾಗುವುದು ಎಂದರು.
ಹಾಪ್ ಕಾಮ್ಸ್ ಮಳಿಗೆ ಹೆಚ್ಚುವುದರಿಂದ ತೋಟಗಾರಿಕಾ ಬೆಳೆಗಾರರು, ರೈತರಿಗೆ ಹೆಚ್ಚಿನ ಲಾಭವಾಗಲಿದೆ. ನೇರವಾಗಿ ಹಾಪ್ ಕಾಮ್ಸ್ ಮಳಿಗೆಗಳಿಗೆ ಬೆಳೆದ ಹಣ್ಣು ತರಕಾರಿ ಮಾರಾಟ ಮಾಡಬಹುದಾಗಿದೆ.ಇನ್ನೊಂದೆಡೆ ಗ್ರಾಹಕರಿಗೆ ಕಡಿಮೆ ದರದಲ್ಲಿ ತಾಜಾ ಹಣ್ಣು ತರಕಾರಿ ಸಿಗಲಿವೆ ಎಂದ ಅವರು, ಹಡ್ಸನ್ ವೃತ್ತದಲ್ಲಿ ನೂತನ ವಾಗಿ ನಿರ್ಮಾಣ ಆಗುತ್ತೀರುವ ಹಾಪ್ ಕಾಮ್ಸ್ ಕಟ್ಟಡಕ್ಕೆ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ,ಬಿಬಿಎಂಪಿ ವ್ಯಾಪ್ತಿಯಲ್ಲೂ ಹಾಪ್ ಕಾಮ್ಸ್ ಅಭಿವೃದ್ಧಿಗೆ ಮುಂದಾಗುವುದು.ಜೊತೆಗೆ, ಸರ್ಕಾರವು ಅಗತ್ಯ ನೆರವು ನೀಡಬೇಕು.ಇದರಿಂದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ದೊರೆಯಲಿದೆ ಎಂದು ಹೇಳಿದರು.
ಹಾಪ್‍ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಬೆಂಗಳೂರು ನಗರದಲ್ಲಿರುವ ಸಂಸ್ಥೆಯ ಎಲ್ಲಾ ಮಾರಾಟ ಮಳಿಗೆಗಳು, ಪ್ರಮುಖ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳ ಆವರಣ ಮತ್ತು ಆಯ್ದ ಸ್ಥಳಗಳಲ್ಲಿ ದ್ರಾಕ್ಷಿ, ಕಲ್ಲಂಗಡಿ ದೊರೆಯಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
