ಚಿಕ್ಕನಾಯಕನಹಳ್ಳಿ
ಕಾನೂನಿನಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಯುವಕರಲ್ಲಿ ಜಾಗೃತಿ ಮೂಡಿಸಿದರೆ ಅಸ್ಪøಷ್ಯತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿಯ ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಅಸ್ಪಷ್ಯತೆ ಸದ್ಭಾವನಾ ನಿವಾರಣಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಸ್ಪಷ್ಯತೆ ಮಾಡುವವರನ್ನು ಸಭೆಗೆ ಕರೆಸಿ ಅವರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಪ್ರಯತ್ನಿಸಿದರೆ ಮಾತ್ರ ಅಸ್ಪಷ್ಯತೆ ನಿವಾರಿಸಲು ಸಾಧ್ಯ. ಕಾಲೇಜು ಹಾಗೂ ಪ್ರೌಢಶಾಲಾ ಮಕ್ಕಳಿಗೆ ಅಸ್ಪಷ್ಯತೆಯ ಬಗ್ಗೆ ಅರಿವು ಮೂಡಿಸಿ, ಎಲ್ಲರೂ ಒಂದೇ ಎಂಬ ಭಾವನೆ ಮೂಡಿದರೆ ಮಾತ್ರ ಅಸ್ಪøಷ್ಯತೆ ತೊಲಗಿಸಲು ಸಾಧ್ಯ ಎಂದರು.
ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ರೇಣುಕಾದೇವಿ ಮಾತನಾಡಿ, ಕಳೆದ ವರ್ಷ ಸರ್ಕಾರ ಅಸ್ಪಷ್ಯತಾ ನಿವಾರಣಾ ಕಾರ್ಯಕ್ರಮಕ್ಕೆ 2 ಲಕ್ಷರೂ. ಬಿಡುಗಡೆ ಮಾಡಿತ್ತು. ಈ ಹಣದಲ್ಲಿ 1.5 ಲಕ್ಷ ಖರ್ಚಾಗಿದ್ದು, 50 ಸಾವಿರ ರೂಪಾಯಿ ಉಳಿದಿದೆ. 2018-19ನೇ ಸಾಲಿನಲ್ಲಿ ಅಸ್ಪøಷ್ಯತಾ ನಿವಾರಣಾ ಕಾರ್ಯಕ್ರಮಕ್ಕೆ ಅನುಮೋದನೆ ಮಾಡದೆ ಇರುವುದರಿಂದ ಹಣ ಬಿಡುಗಡೆಯಾಗಿಲ್ಲ. ಕಳೆದ ವರ್ಷದ 50 ಸಾವಿರ ರೂಪಾಯಿ ಉಳಿದಿದ್ದು ಈ ಹಣದಲ್ಲಿ ಅಸ್ಪಷ್ಯತಾ ನಿವಾರಣಾ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಮಾತನಾಡಿದ ಡಿ.ಎಸ್.ಎಸ್.ಮುಖಂಡರು, ಕಳೆದ ವರ್ಷ 28 ಗ್ರಾಮ ಪಂಚಾಯಿತಿಗಳಲ್ಲಿ ಅಸ್ಪøಷ್ಯತೆ ನಿವಾರಣಾ ಕಾರ್ಯಕ್ರಮವು, 26 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದೆ. ಕಲಾ ತಂಡಗಳು, ಬೀದಿ ನಾಟಕಗಳು ಹಾಗೂ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿದ್ದೆವು. ಆದರೆ ಎರಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆದಿರಲಿಲ್ಲ. ಈ ಬಾರಿ ಗಾಣದಾಳು ಹಾಗೂ ಹೊಯ್ಸಳಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿ ನಾಟಕ, ಕಲಾ ತಂಡಗಳು ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಇದಕ್ಕೆ ಅಧಿಕಾರಿಗಳು ಸ್ಪಂದಿಸುವಂತೆ ಮನವಿ ಮಾಡಿದರು.ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದ ಶಾಲಾ ಕಾಲೇಜುಗಳಲ್ಲಿ ಸಭೆ ನಡೆಸಿ ಅಸ್ಪøಷ್ಯತಾ ನಿವಾರಣಾ ದಿನಾಚರಣೆ ಮಾಡಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ನಿರ್ವಾಣಯ್ಯ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ್, ವಕೀಲ ಜಯಣ್ಣ, ಡಿ.ಎಸ್.ಎಸ್.ಮುಖಂಡರಾದ ಗೋ.ನಿ.ವಸಂತ್‍ಕುಮಾರ್, ಲಿಂಗದೇವರು, ಮಲ್ಲಿಕಾರ್ಜುನಯ್ಯ, ಗೋವಿಂದಪ್ಪ, ಕೆಂಪರಾಜು, ತೀರ್ಥಪುರಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
