ಹಾವೇರಿ :
ನ.26ರಂದು ನಡೆಯುವ ಕನಕದಾಸರ 531 ಜಯಂತ್ಯೋತ್ಸವ ಅಂಗವಾಗಿ ಕರ್ನಾಟಕ ಪ್ರದೇಶ ಕುರಬರ ಸಂಘ ಜಿಲ್ಲಾ ಘಟಕ ಹಾಗೂ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಸಂಯೋಗದಲ್ಲಿ ನ.12 ಸೋವವಾರ ಬೆಳಿಗ್ಗೆ 10.30ಕ್ಕೆ ಶೀಮಠದ ಪೀಠಾಧಿಪತಿಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪೂರ್ವಬಾವಿ ಸಭೆಯನ್ನು ಕರೆಯಲಾಗಿದೆ.
ಈ ಪರ್ವಭಾವಿ ಸಭೆಯು ಕಾಗಿನೆಲೆ ಶ್ರೀಮಠದಲ್ಲಿ ನಡೆಯಲಿದ್ದು, ಧರ್ಮದರ್ಶಿಗಳು, ಸಮಾಜ ಮಖಂಡರು ಗಣ್ಯಮಾನ್ಯರು, ಜಿಲ್ಲಾ ಕುರಬ ಸಂಘದ ಹಾಗೂ ತಾಲೂಕಿನ ಪದಾಧಿಕಾರಿಗಳು, ಕನಕ ಭಕ್ತಾಧಿಗಳು, ಸಭೆಯಲ್ಲಿ ಹಾಜರಿದ್ದು, ಕನಕ ಜಯಂತಿ ಆಚರಣೆ ಯಶಸ್ವಿಗೆ ಸಲಹೆ ಸೂಚನೆಯನ್ನು ನೀಡಬೇಕೆಂದು ಜಿಲ್ಲಾ ಪ್ರದೇಶ ಕುರಬ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಹರಿಹರ,ಜಿಲ್ಲಾ ಕಾರ್ಯದರ್ಶಿ ಹನುಮಂತಗೌಡ ಗಾಜೀಗೌಡ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
