ಹಾನಗಲ್ಲ :
ಹಾನಗಲ್ಲ ತಾಲೂಕಿನ ಹಿರೂರು ಗ್ರಾಮದಲ್ಲಿ ದೇಶದ್ರೋಹದ ಕೆಲಸ ಮಾಡಿದ ದ್ರೋಹಿಗಳ ಮೇಲೆ ಡಮ್ಮಿ ಕೇಸ್ ದಾಖಲಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದ ಸರಕಾರಿ ಆಡಳಿತದ ಕ್ರಮ ಖಂಡಿಸಿ ಭಾರತೀಯ ಜನ ಜಾಗ್ರತಿ ಸಮಿತಿ ಹಾನಗಲ್ಲಿನಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಅರ್ಪಿಸಿದೆ.
ಸೋಮವಾರ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಭಾರತೀಯ ಜನಜಾಗ್ರತಿ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೆ ಮಹಾತ್ಮಾಗಾಂಧಿ ವೃತ್ತದಲ್ಲಿ ರಸ್ತೆತಡೆ ನಡೆಸಿದ್ದಲ್ಲದೆ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ನಂತರ ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣರಾವ್ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣರಾವ್, ಈ ಪ್ರಕರಣದ ತನಿಖೆ ನಡೆಸಿ ಅಪರಾಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಹಾಗೂ ತಪ್ಪಿತಸ್ತರನ್ನು ಗಡಿಪಾರು ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಹಿರೂರು ಪ್ರಕರಣದಲ್ಲಿ ಸರಕಾರದ ಕೈಗೊಂಬೆಯಾಗಿರುವ ಪೊಲಿಸ್ ಇಲಾಖೆ ಡಮ್ಮಿ ಕೇಸ್ ತೋರಿಸಿ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆಗೂ ವಿರೋಧ ವ್ಯಕ್ತಪಡಿಸುತ್ತಿರುವ ದುಷ್ಕರ್ಮಿಗಳನ್ನು ರಕ್ಷಿಸುತ್ತಿರುವ ಸರಕಾರಿ ಆಡಳಿತ ಜನತೆಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪರೋಕ್ಷವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆಪಾದಿಸಿದರು.ಹಿರೂರು ಗ್ರಾಮದ ಹತ್ತಿರ ಮುಸ್ಲಿಂ ಸಮುದಾಯದಿಂದ ಶಿಕ್ಷಣ ಕೇಂದ್ರದ ಹೆಸರಿನಲ್ಲಿ ಘಟವೊಂದು ಹಲವು ರೀತಿಯ ದೇಶವಿರೋಧಿ ಚಟುವಟಿಕೆಗಳ ತಾಣವನ್ನಾಗಿಸಿಕೊಂಡು ಕೆಲವರಿಗೆ ಸಂರಕ್ಷಣೆ ನೀಡುತ್ತಿರುವುದು ಸಂಶಯಾಸ್ಪದವಾಗಿ ತಿಳಿದುಬಂದಿದೆ. ಆದರೆ ಸರಕಾರಿ ಆಡಳಿತ ಕಣ್ಣಿದ್ದು ಕುರುಡರಂತೆ ಜಾಣಕುರುಡು ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಈ ಕೇಂದ್ರದ ಮೇಲೆ ನಿಗಾಇಡುವ ಅವಶ್ಯಕತೆ ಇದೆ ಸಂತೋಷ ಆಲದಕಟ್ಟಿ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ .
ವಿಶ್ವಹಿಂದೂ ಪರಿಷತ್ ಮುಖಂಡ ಎಚ್. ಪ್ರವೀಣಕುಮಾರ ಮಾತನಾಡಿ, ಮಸೀದಿಗಳನ್ನು ರಸ್ತೆ ಬದಿ ಕಟ್ಟಿಕೊಂಡು ಸಾರ್ವಜನಿಕ ಆಚರಣೆಗಳಿಗೆ ಅಡ್ಡಿಪಡಿಸುವುದನ್ನು ನಿಲ್ಲಿಸಿ ರಸ್ತೆಗಳೇ ಇಲ್ಲದಲ್ಲಿ ಮಸೀದಿಗಳನ್ನು ಕಟ್ಟಿಕೊಳ್ಳಲಿ. ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವ ಕಿಡಿಗೇಡಿಗಳನ್ನು ನಿಯಂತ್ರಿಸುವಲ್ಲಿ ಸರಕಾರಿ ಆಡಳಿತ ವಿಫಲವಾಗಿದೆ. ಹಿಂದೂಗಳ ಸಣ್ಣ ಮೆರವಣಿಗೆಗೂ ತಕರಾರು ತೆಗೆಯುವ ಸರಕಾರಿ ಆಡಳಿತ ಸರಕಾರ ನಡೆಸುವ ರಾಷ್ಟ್ರೀಯ ಹಬ್ಬದ ಮೆರವಣಿಗೆಗ ಅಡ್ಡಿಪಡಿಸುವವರನ್ನು ತಹಬದಿಗೆ ತರುವಲ್ಲಿ ವಿಫಲವಾಗಿರುದು ಇವರು ಸರಕಾರಿ ಆಡಳಿತದ ಕೈಗೊಂಬೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿ.ಸಿ.ಪಾಟೀಲ, ಆರ್.ಸಿ.ಪಾಟೀಲ, ಮಹೇಂದ್ರ ಬೀಳಗಿ, ನಿಂಗರಾಜ ಗೊಬ್ಬೇರ, ನಾಗನಗೌಡ ಪಾಟೀಲ, ಬಸವಂತ ಮೆಳ್ಳಿಹಳ್ಳಿ, ವೀರಭದ್ರ ಜಡೆಗೊಂಡರ, ದಾನೇಶ ಮೆಳ್ಳಿಹಳ್ಳಿ, ಪ್ರವೀನ ಕೊಬೊಡಿ, ನಿಂಗಪ್ಪ ಕ್ಷೌರದ, ಚಂದ್ರಪ್ಪ ಕಾರೇರ, ಗುಡ್ಡಪ್ಪ ಕಡಕೋಳ, ಚನ್ನಪ್ಪಗೌಡ ಪಾಟೀಲ ಮೊದಲಾದವರಿದ್ದರು.
ಮಹಿಳೆಯರ ಆಕ್ರೋಶ :
ಹಾನಗಲ್ಲ ತಾಲೂಕು ಹಿರೂರು ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿರೂರು ಗ್ರಾಮದಲ್ಲಿ ಪದೆಪದೆ ಈ ಮಸೀದಿಯನ್ನು ನೆಪ ಮಾಡಿಕೊಂಡು ಒಂದು ಕೋಮಿನವರು ಗ್ರಾಮದ ಶಾಂತಿಯನ್ನು ಕದಡುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳನ್ನು ಕೆದಕುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣೆಗೂ ಅಡ್ಡಿಪಡಿಸುತ್ತಿರುವ ಕೋಮುವಾದಿಗಳನ್ನು ಸರಕಾರ ಬಂಧಿಸಿ ಹಿರೂರು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಅಲ್ಲಿಯವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ ಹೀರೂರು ಗ್ರಾಮದಲ್ಲಿ ಮತ್ತೆ ಇಂಥ ಘಟನೆಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಭರವಸೆಯ ಮೇರೇಗೆ ಮಹಿಳೆಯರು ಪ್ರತಿಭಟನೆ ಕೈಬಿಡಲು ಸಹಕರಿಸಿದರು.